ಗುತ್ತಿಗಾರು ಸೈoಟ್ ಮೇರಿಸ್ ಚರ್ಚ್ ನ ಧರ್ಮಗುರು ಆದರ್ಶ್ ಜೋಸೆಫ್ ವರ್ಗಾವಣೆ

0

ಗುತ್ತಿಗಾರಿನ ಸೈoಟ್ ಮೇರಿಸ್ ಚರ್ಚ್ ನ ಧರ್ಮಗುರು ರೆ.ಫಾ.ಆದರ್ಶ್ ಜೋಸೆಫ್ ಬೆಳ್ತಂಗಡಿಗೆ ವರ್ಗಾವಣೆಗೊಂಡಿದ್ದಾರೆ.
ಮೇ.24 ರಿಂದ ಅವರು ವರ್ಗಾವಣೆಗೊಂಡಿದ್ದು ಇನ್ನು ಮುಂದೆ ಅವರು ಸಂಸ್ಥೆಯ ಸಮಾಜ ಸೇವಾ ವಿಭಾಗ ( D. K R D S) ಇದರ ನಿರ್ದೇಶಕರಾಗಿ ಸೇವಾ ಕಾರ್ಯ ಮುಂದುವರಿಸಲಿದ್ದಾರೆ.

ನೆಟ್ಟಣ ಮತ್ತು ಗುತ್ತಿಗಾರು ಎರಡೂ ಕಡೆ ಧರ್ಮಗುರು ಆಗಿದ್ದ ಇವರು ಕಳೆದ ಮೂರು ವರ್ಷಗಳಿಂದ ಗುತ್ತಿಗಾರಿನ ಚರ್ಚ್ ನಲ್ಲಿ ಕರ್ತವ್ಯ ನಿರ್ವಹಿಸುತಿದ್ದರು.

ಕೊರೋನಾ ಸಂದರ್ಭ ಮತ್ತು ಅಗತ್ಯ ಸಂದರ್ಭಗಳಲ್ಲಿ ಸಮಾಜ ಸೇವಾ ಕಾರ್ಯ ಮಾಡಿ ಜನಾನುರಾಗಿದ್ದ ಇವರು ಗುತ್ತಿಗಾರು ಚರ್ಚ್ ಗೆ ಬಂದ ಮೇಲೆ ಗುತ್ತಿಗಾರಿನ ಚರ್ಚ್ ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿತ್ತು.