ಜೂ. 19ರಿಂದ ಜು.9ರವರಗೆ ರಸ್ತೆ ಸಂಚಾರ ಇಲ್ಲ














ದೊಡ್ಡತೋಟ – ಮರ್ಕಂಜ ರಸ್ತೆ ಕಾಂಕ್ರೀಟ್ ಕಾಮಗಾರಿ ಜೂ. 19ರಿಂದ ಆರಂಭವಾಗಲಿದೆ.
ಈ ರಸ್ತೆಯ ದೊಡ್ಡತೋಟದಿಂದ 3.5 ಕಿ. ಮೀ. ರಸ್ತೆ ಡಾಮಾರೀಕರಣಗೊಂಡಿದೆ. ಅದರಲ್ಲಿ 4 ಕಡೆಗಳಲ್ಲಿ ಕಾಂಕ್ರೀಟ್ ಮಾಡಲು ಬಾಕಿ ಇತ್ತು. ಈ ಕಾಮಗಾರಿ ಜೂ. 19ರಿಂದ ಆರಂಭಗೊಳ್ಳಲಿದ್ದು, ಅಂದಿನಿಂದ ಜು.9ರವರಗೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂದಿಸಲಾಗಿದೆ. ಸಾರ್ವಜನಿಕರು ಬದಲಿ ರಸ್ತೆ ಉಪಯೋಗಿಸಬೇಕಾಗಿದೆ.







