ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಸಚಿವ ಯು.ಟಿ.ಖಾದರ್ ಭೇಟಿ‌ ಮಾಡಿದ‌ ಸುಳ್ಯ ಕಾಂಗ್ರೆಸ್ ಪ್ರಮುಖರು

0

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಕೆ.ಹರಿಪ್ರಸಾದ್ ಹಾಗೂ ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಯು.ಟಿ.ಖಾದರ್ ರನ್ನು ಸುಳ್ಯದ ಕಾಂಗ್ರೆಸ್ ಪ್ರಮುಖರು ಬೆಂಗಳೂರಿನಲ್ಲಿ ಭೇಟಿಯಾಗಿ ಗೌರವ ಸಲ್ಲಿಸಿದರು.

ಜೂ.10ರಂದು ಬೆಂಗಳೂರಿಗೆ ತೆರಳಿದ ಇಂಟಕ್ ಕಾಂಗ್ರೆಸ್ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ, ಸುಳ್ಯ‌ ನಗರ ಪಂಚಾಯತ್ ನಾಮ ನಿರ್ದೇಶಿತ ಸದಸ್ಯ ರಾಜು ಪಂಡಿತ್, ಆರೋಗ್ಯ ರಕ್ಷಾ‌ಸಮಿತಿ‌ ಸದಸ್ಯ ಶಹೀದ್ ಪಾರೆ, ಶ್ರೀಜೇಶ್ ಜಯನಗರ, ಸನತ್ ಕುಮಾರ್ ಕಾಂತಮಂಗಲರವರು ಬಿ.ಕೆ. ಹರಿಪ್ರಸಾದ್ ರನ್ನು ಅವರ ನಿವಾಸದಲ್ಲಿ‌ ಹಾಗೂ ಯು.ಟಿ. ಖಾದರ್ ರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಶಾಲು, ಹೂಗುಚ್ಚ ನೀಡಿ ಗೌರವಿಸಿದರು. ಯು.ಟಿ. ಖಾದರ್ ರನ್ನು ಭೇಟಿಯಾದ ಸಂದರ್ಭ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪರವರು ಉಪಸ್ಥಿತರಿದ್ದರು.