













ಹಾವೇರಿ ಮೂಲದ ನಿವಾಸಿ ಚಿನ್ನಪ್ಪ (೩೪ ವರ್ಷ) ಅಲ್ಪಕಾಲದ ಅಸೌಖ್ಯದಿಂದ ಜೂ. ೧೯ ರಂದು ಸಂಜೆ ಮರ್ಕಂಜದ ಸೇವಾಜೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ ಮದ್ಯಪಾನದ ಚಟವಿದ್ದು ಆಗಾಗ ಅನಾರೋಗ್ಯ ಕಾಡುತ್ತಿತ್ತು.
ಮೃತರು ತಂದೆ ನಾರಾಯಣಪ್ಪ, ತಾಯಿ ಶಿಲ್ಪ, ಪತ್ನಿ ಮಮತಾ ಹಾಗೂ ಪುತ್ರ ರಾಕೇಶ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ತಂದೆ ಮತ್ತು ಕುಟುಂಬದ ಸದಸ್ಯರು ಸುಳ್ಯಕ್ಕೆ ಬಂದಿದ್ದು, ಮರ್ಕಂಜದಿಂದ ಮೃತ ದೇಹವನ್ನು ಸುಳ್ಯದ ಶಿವ ಆಂಬುಲೆನ್ಸ್ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ತಂದು ಇರಿಸಲಾಗಿದೆ.







