ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ವತಿಯಿಂದ ಗುರುವಂದನ ಆಚರಣೆ

0

ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಆ.4 ರಂದು ಗುರುವಂದನಾ ಕಾರ್ಯಕ್ರಮವನ್ನು ಪರ್ವತಮುಖಿ ಸ್ಕಂದ ಕೃಪಾದಲ್ಲಿ ಆಯೋಜಿಸಲಾಯಿತು.
ಪಂಜ ಕೆ.ಪಿ.ಎಸ್. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಇನ್ನರ್ ವೀಲ್ ಕ್ಲಬ್ ಪೂರ್ವ ಅಧ್ಯಕ್ಷೆ ಲೀಲಾಕುಮಾರಿ ವಿಶ್ವನಾಥ್ ನಡುತೋಟ ಅವರನ್ನು ಸುಬ್ರಹ್ಮಣ್ಯ ಇನ್ನರ್ ವಿಲ್ ಕ್ಲಬ್ ಅಧ್ಯಕ್ಷೆ ಸೌಮ್ಯ ದಿನೇಶ್ ಅವರು ಗುರುವಂದನೆ ಮೂಲಕ ಗೌರವ ಸಲ್ಲಿಸಿದರು.ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ನ ಪೂರ್ವ ಅಧ್ಯಕ್ಷೆ ವಿಮಲಾ ರಂಗಯ್ಯ ಕಾರ್ಯದರ್ಶಿ ಶೋಭಾ ಗಿರಿಧರ್ ಪೂರ್ವ ಅಧ್ಯಕ್ಷೆ ಜಾನಕಿ ವೆಂಕಟೇಶ್ ಹಾಗೂ ಸಚಿತ ಗೋಪಾಲ್ ಹಾಜರಿದ್ದರು.