













ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಶ್ರೀ ದುರ್ಗಾ ಮಹಿಳಾ ಮಂಡಲ (ರಿ) ಕೂತ್ಕುಂಜ , ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್ ಇವರ ಸಹಯೋಗದಲ್ಲಿ ಆಟಿ ಉತ್ಸವ ಕಾರ್ಯಕ್ರಮ ಇತ್ತೀಚೆಗೆ ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ಅವರ ಚಿದ್ಗಲ್ ನಿವಾಸದಲ್ಲಿ ಆಯೋಜಿಸಲಾಯಿತು.
ಸಭಾಧ್ಯಕ್ಷತೆಯನ್ನು ಅರೆ ಭಾಷೆ ಅಕಾಡೆಮಿ ಸದಸ್ಯೆ ಶ್ರೀಮತಿ ಲತಾ ಪ್ರಸಾದ್ ಕುದ್ಪಾಜೆ ವಹಿಸಿದ್ದರು. ಉದ್ಘಾಟನೆಯನ್ನು ಶ್ರೀಮತಿ ದೇವಕಿ ಧರ್ಮಪಾಲ ಚಿದ್ಗಲ್ ( ಅಧ್ಯಕ್ಷರು, ಶ್ರೀ ದುರ್ಗಾಮಹಿಳಾ ಮಂಡಲ ಕೂತ್ಕುಂಜ ) ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುಗಂಧಿ ಬಾಲಕೃಷ್ಣ ಪುತ್ಯ ( ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ಡಿನಂಗಡಿ ) ಆಗಮಿಸಿದ್ದರು . ಶ್ರೀಮತಿ ಚಂದ್ರಾವತಿ ಭಾಸ್ಕರ ಚಿದ್ಗಲ್ ( ಅಧ್ಯಕ್ಷರು, ದುರ್ಗಾಶ್ರೀ ರೈತ ಸಂಘ ಚಿದ್ಗಲ್ ), ದೇವಿಪ್ರಸಾದ್ ಕುದ್ಪಾಜೆ ( ಪೂರ್ವಾಧ್ಯಕ್ಷರು ಜೆ. ಸಿ. ಐ. ಸುಳ್ಯ ) ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ( ಅಧ್ಯಕ್ಷರು, ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್ ಹಾಗೂ ಮಹಿಳಾ ಸಂಘಟನೆ ) ಸ್ವಾಗತಿಸಿ ಪ್ರಸ್ತಾವನೆಗೈದತು , ಶ್ರೀಮತಿ ಹೇಮಾ ವಸಂತ್ ಚಿದ್ಗಲ್ ( ಅಧ್ಯಕ್ಷರು -ಧನುಶ್ರೀ ಮಹಿಳಾ ನವೋದಯ ಸ್ವಸಹಾಯ ಸಂಘ ಚಿದ್ಗಲ್ ) ಕಾರ್ಯಕ್ರಮ ನಿರೂಪಿಸಿದರು. ಚಂದ್ರಾವತಿ ಚಿನ್ನಪ್ಪ ಚಿದ್ಗಲ್ ಪ್ರಾರ್ಥಿಸಿದರು. ವೀಣಾ ಗಿರಿಧರ ಇಟ್ಯಡ್ಕ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಎಕ್ಕಟ್ಟಿ ಸ್ಪರ್ಧೆ,ಚೆನ್ನಮಣೆ ಸ್ಪರ್ಧೆ,ಬಾಲ್ ಪಾಸಿಂಗ್,ಬಿಸ್ಕೆಟ್ ತಿನ್ನುವ ಸ್ಪರ್ಧೆ,ಸಿಹಿ ತಿಂಡಿ ಸ್ಪರ್ಧೆ. ಪುರುಷರಿಗೆ ಚೆನ್ನಮಣೆ ಸ್ಪರ್ಧೆ, ಬಾಲ್ ಪಾಸಿಂಗ್, ಮಕ್ಕಳಿಗೆ ಬಿಸ್ಕೆಟ್ ತಿನ್ನುವ ಸ್ಪರ್ಧೆ, ಬಲೂನ್ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಮಧ್ಯಾಹ್ನ ಭೋಜನದಲ್ಲಿ ಸಹಕರಿಸಿದ ಬಾಲಕೃಷ್ಣ ಬಿಳಿಮಲೆ ಇವರನ್ನು ಹೊನ್ನಪ್ಪ ಗೌಡ ಚಿದ್ಗಲ್ ರವರು ಹಾಗೂ ಸ್ಥಳ ದಾನಿಗಳಾದ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ರವರನ್ನು ಲತಾ ಪ್ರಸಾದ್ ಕುದ್ಪಾಜೆ ಯವರು ಗೌರವಿಸಿದರು.
ಶಿವಾಜಿ ಯುವಕ ಮಂಡಲದ ಸ್ಥಾಪಧ್ಯಕ್ಷರಾದ ಯೋಗೀಶ್ ಚಿದ್ಗಲ್ ಹಾಗೂ ಸಂಸ್ಥೆ ಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.







