ಸಫಲ ಉದ್ಯಮ ಇಲೆಕ್ಟ್ರಾನಿಕ್ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನ ಯೋಜನೆ

0

ಒಂದು ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳ ವಿಜೇತರಾದ ತಾರನಾಥ್ ಆರ್ನೋಜಿ

ಎರಡನೇ ಆವೃತಿಯ ಹೊಸ ಕಾರ್ಡ್ ಬಿಡುಗಡೆ

ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ 10 ನೇ ತಿಂಗಳ ಡ್ರಾ ಆ. 15 ರಂದು ಸಫಲ ಉಧ್ಯಮ ಇಲೆಕ್ಟ್ರಾನಿಕ್ ಶೋ ರೂಂ ನಲ್ಲಿ ನಡೆಯಿತು.

ಕಾರ್ಡ್ ಸಂಖ್ಯೆ S 1303 ರ ತಾರಾನಾಥ್ ಆರ್ನೋಜಿ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತರಾಗಿದ್ದಾರೆ.
ಅದೃಷ್ಟ ಡ್ರಾ ವಿಜೇತರ ಆಯ್ಕೆಯನ್ನು ಸುಳ್ಯದ ಖ್ಯಾತ ವೈದ್ಯ ಡಾ. ಭವಾನಿಶಂಕರ್ ನಡೆಸಿಕೊಟ್ಟರು.

ಇದೇ ಸಂದರ್ಭದಲ್ಲಿ ಎರಡನೇ ಆವೃತಿಯ ಹೊಸ ಕಾರ್ಡ್ ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಪಾಲುದಾರರು, ಸಿಬ್ಬಂದಿಗಳು ಸೇರಿದಂತೆ ಹಲವಾರು ಮಂದಿ ಗ್ರಾಹಕರು ಉಪಸ್ಥಿತರಿದ್ದರು. ನಂದನ್ ಪವಿತ್ರಮಜಲು ಸಹಕರಿಸಿದರು.