ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈ ಸಭೆ ಪೂರಕವಾಗಲಿದೆ: ಭರತ್ ಮುಂಡೋಡಿ
ಸೆ.18 ರಂದು ಮಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಇಡೀ ದ. ಕ ಜಿಲ್ಲೆಯ ಜನತೆಗೆ ಖುಷಿಪಡುವ ವಿಷಯವಾಗಿದೆ.ಪ್ರಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ನೇತೃತ್ವದ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯಲಿದ್ದು ಈ ಸಭೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ ಯವರು ತಿಳಿಸಿದರು.














ಸೆ.16 ರಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸುಳ್ಯ ಪ್ರಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿದ ಅವರು ‘ಕರಾವಳಿಯ ಬಹುಕಾಲದ ಬೇಡಿಕೆಗಳು, ಅಭಿವೃದ್ಧಿಯ ಕನಸುಗಳು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲೇ ಪರಿಹಾರ ಕಂಡುಕೊಳ್ಳುವ ಮಹತ್ವದ ಹೆಜ್ಜೆಯಾಗಿ ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.ಇದು ಕೇವಲ ಸಚಿವ ಸಂಪುಟ ಸಭೆ ಮಾತ್ರವಲ್ಲ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುನ್ನತ ನಿರ್ಧಾರವೂ ಕೂಡ ಆಗಿದೆ ಎಂದರು.
ಬೆಂಗಳೂರಿನ ಹೊರಗೆ ಸಚಿವ ಸಂಪುಟ ಸಭೆ ನಡೆಸುವ ಸರಣಿಯ ಭಾಗವಾಗಿ ಈ ಬಾರಿ ಕರಾವಳಿಗೆ ಅವಕಾಶ ಸಿಕ್ಕಿದ್ದು, ದಕ್ಷಿಣ ಕನ್ನಡ ಮಾತ್ರವಲ್ಲದೆ ಇಡೀ ಕರಾವಳಿ ಕರ್ನಾಟಕದ ಮೇಲೆ ಸರ್ಕಾರದ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.ಪ್ರಮುಖವಾಗಿ ನಮ್ಮ ಜಿಲ್ಲೆಯ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಗಳ ಅಭಿವೃದ್ಧಿ ಹಾಗೂ ರಸ್ತೆ ಮತ್ತು ಮೂಲಸೌಕರ್ಯ, ಬಂದರು ಅಭಿವೃದ್ಧಿ, ಮೀನುಗಾರಿಕೆ, ಪ್ರವಾಸೋದ್ಯಮ, ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿ ವಿಚಾರಗಳಿಗೆ ಆದ್ಯತೆ ಸಿಗುವ ಸಾಧ್ಯತೆಯಿದೆ ಎಂದರು.
ದಕ್ಷಿಣ ಕನ್ನಡದಲ್ಲಿ ಕೈಗಾರಿಕಾ ವಲಯಗಳು ಹೆಚ್ಚಾಗಿದ್ದು ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ, ಮೀನುಗಾರರಿಗೆ ಅಗತ್ಯವಿರುವ ಸೌಲಭ್ಯ ಯೋಜನೆಗಳು ಹಾಗೂ ಬಂದರು ಮತ್ತು ಬೀಚ್ ಅಭಿವೃದ್ಧಿ ಸಂಬಂಧಿತ ಮೂಲಸೌಕರ್ಯಗಳು,
ಕರಾವಳಿ ಪ್ರದೇಶವನ್ನು ಪ್ರವಾಸೋದ್ಯಮದ ಪ್ರಮುಖ ತಾಣವನ್ನಾಗಿ ಜಿಲ್ಲೆಯನ್ನು ರೂಪಿಸುವುದು ಸೇರಿದಂತೆ ಹಲವು ವಿಚಾರಗಳಿಗೆ ಈ ಸಭೆ ಪೂರಕವಾಗಲಿದೆ ಎಂದು ಅವರು ಹೇಳಿದರು.ಅಲ್ಲದೆ ಸುಳ್ಯ ತಾಲೂಕಿಗೆ ಸಂಬಂಧಪಟ್ಟಂತೆ ಅಡಿಕೆ ಕೃಷಿಕರು ಕೃಷಿ ರೋಗಗಳಿಂದ ಅನುಭವಿಸುವ ಸಮಸ್ಯೆಗಳ ಬಗ್ಗೆ ಮತ್ತು ತಾಲೂಕಿನ ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರುಗಳ ಗಮನಕ್ಕೆ ಈಗಾಗಲೇ ಮಾಹಿತಿ ನೀಡಿರುವ ಬಗ್ಗೆಯೂ ಅವರು ತಿಳಿಸಿದರು.ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನದ ಬಗ್ಗೆ ಮತ್ತು ಕಸ್ತೂರಿರಂಗನ್ ವರದಿಯ ಕುರಿತು ಕೃಷಿಕರಿಗೆ ನ್ಯಾಯಯುತ ಆಗುವ ಬಗ್ಗೆ ಈ ಸಭೆಯಲ್ಲಿ ನಿರ್ಧಾರಗಳು ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಕೃಷ್ಣ ಬೊಳ್ಳೂರು ರವರು ಮಾತನಾಡಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸುಳ್ಯ ತಾಲೂಕಿನ ಸಂಕಷ್ಟ-
ಬೇಡಿಕೆಯ ಪ್ರಸ್ತಾವನೆಗಳಿಗೆ ಆಧ್ಯತೆ ನೀಡುವಂತೆ ಸಂಬಂಧಪಟ್ಟ ನಾಯಕರುಗಳಿಗೆ ಮನವಿಯನ್ನು ಮಾಡಲಾಗಿದ್ದು ‘ಸುಳ್ಯ ತಾಲೂಕು ಕಳೆದ 35 ವರ್ಷಗಳಿಂದ ಮೀಸಲು ಕ್ಷೇತ್ರವಾಗಿದ್ದು ಸುಳ್ಯ ಪಟ್ಟಣ ಪಂಚಾಯತ್ ನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಘೋಷಿಸುವುದು.
ಪೂರ್ಣಪ್ರಮಾಣದ ಪ್ರಾಧಿಕಾರವನ್ನಾಗಿ ಘೋಷಿಸುವುದು.ಸುಳ್ಯ ತಾಲೂಕಿನ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಆಧ್ಯತೆ ನೀಡಿ ಸರ್ವಋತು ರಸ್ತೆಗಳನ್ನಾಗಿ ಮಾರ್ಪಡಿಸುವುದು.ಸುಳ್ಯ ತಾಲೂಕು ರಬ್ಬರ್ ಬೆಲೆಯನ್ನು ಆಶ್ರಯಿಸಿರುವುದರಿಂದ ರಬ್ಬರ್ಗೆ ಸಂಬಂಧಿಸಿದ ರಬ್ಬರ್ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಸ್ಥಳೀಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಗೆ ಆಧ್ಯತೆ ನೀಡುವುದು.ಪ್ರಮುಖ ಬೇಡಿಕೆಯಾಗಿರುವ ವಿದ್ಯುತ್ ಕವಿ ಲೈನ್ ಕೂಡಲೇ ಅನುಷ್ಠಾನ ಮಾಡಿ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಆಧ್ಯತೆ ನೀಡುವುದು.ಕೇಂದ್ರ ತೆರೆಯುವುದು.ಸುಳ್ಯ ತಾಲೂಕಿನ ಪ್ರಮುಖ ಬೆಳೆಯಾದ ಅಡಿಕೆ ಕೃಷಿಗೆ ಬಾಧಿಸಿರುವ ಹಳದಿರೋಗ, ಎಲೆಚುಕ್ಕಿ ರೋಗ ಮತ್ತು ಇತರ ಕೃಷಿಗಳಿಗೆ ಬಾಧಿಸುವ ರೋಗ ನಿಯಂತ್ರಣಕ್ಕೆ ಸುಳ್ಯದಲ್ಲಿ ಕೃಷಿ ಸಂಶೋಧನಾ ಕೇಂದ್ರ ನಿರ್ಮಿಸುವುದು.ಸುಳ್ಯ ತಾಲೂಕು ಸಂಪೂರ್ಣವಾಗಿ ಗುಡ್ಡಗಾಡು ಆವೃತವಾದ ಪ್ರದೇಶವಾಗಿರುವುದರಿಂದ, ಕಾಡು ಪ್ರಾಣಿಗಳ ಹಾವಳಿಯನ್ನು, ತಡೆಯಲು ಬಂದೂಕು ಪರವಾನಗಿಯ ಕಾನೂನು ನಿಯಮಗಳನ್ನು ಸರಳೀಕರಣಗೊಳಿಸಿ. ಈಗಾಗಲೇ ಅರ್ಜಿ ನೀಡಿರುವ ಅರ್ಹ ರೈತರಿಗೆ ಬಂದೂಕು ಪರವಾನಗಿಯನ್ನು ನೀಡುವುದು.ಸುಳ್ಯ ತಾಲೂಕಿನಲ್ಲಿ ಪ್ರವಾಸೋಧ್ಯಮಕ್ಕೆ ಅರ್ಹವಾಗಿರುವ ತೀರ್ಥಕ್ಷೇತ್ರಗಳು ಮತ್ತು
ಪರಿಸರ ಇರುವುದರಿಂದ ಪ್ರಮುಖ ಟೂರಿಸಂ ಹಬ್ ಆಗಿ ಪರಿವರ್ತಿಸುವುದು. ಸೇರಿದಂತೆ ಇನ್ನಿತರ ಮೂಲಭೂತ ಸೌಲಭ್ಯಗಳ ಬಗ್ಗೆ ಮನವಿಯನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಅಲ್ಲದೆ ಸಭೆ ನಡೆಯುವ ದಿನದಂದು ಸುಳ್ಯದಿಂದ ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರುಗಳು ಭಾಗವಹಿಸಲಿದ್ದು ಜಿಲ್ಲೆಗೆ ಬರುವ ಸಚಿವರುಗಳ ಸ್ವಾಗತ ಕಾರ್ಯಕ್ರಮಕ್ಕೆ ಸಜ್ಜಾಗಲಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೂಡ ಅಧ್ಯಕ್ಷರಾದ ಕೆ ಎಮ್ ಮುಸ್ತಫಾ ಜನತಾ , ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಅಮೈ, ಪ್ರಧಾನ ಕಾರ್ಯದರ್ಶಿ ಭವಾನಿ ಶಂಕರ್ ಕಲ್ಮಡ್ಕ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಸುದ್ದೀನ್ ಅರಂಬೂರು, ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.







