ಸುಳ್ಯ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ

0

ದಲಿತ ಸಭೆ ಎಂದು ಉಲ್ಲೇಖಿಸಬೇಡಿ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಭೆ ಎಂದು ಉಲ್ಲೇಖಿಸಿ ಎಸ್ ಐ ಉದಯ ರವಿ ರವರಿಂದ ಇಲಾಖೆಯಿಂದ ಬಂದ ಆದೇಶದ ಬಗ್ಗೆ ಮಾಹಿತಿ

ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಸಭೆ ಎಸ್ ಐ ಉದಯರವಿ ರವರ ಅಧ್ಯಕ್ಷತೆಯಲ್ಲಿ ಸೆ 20 ರಂದು ನಡೆಯಿತು.

ಸಭೆಯಲ್ಲಿ ಸಮುದಾಯದ ಬಾಂಧವರು ತಮ್ಮ ಕುಂದು ಕೊರತೆಗಳ ಬಗ್ಗೆ ಮಾತನಾಡಿ ತಮ್ಮ ತಮ್ಮ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಎಸ್ ಐ ರವರು ಈ ಸಂದರ್ಭದಲ್ಲಿ ಮಾತನಾಡಿ ಗೃಹ ಇಲಾಖೆಯಿಂದ ಬಂದಿರುವ ಆದೇಶ ಪತ್ರವನ್ನು ವಾಚಿಸಿ ಈಗಾಗಲೇ ನಡೆಸುತ್ತಿರುವ ಸಭೆಯನ್ನು ದಲಿತರ ಸಭೆ ಎಂದು ಕರೆಯುವಂತಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ ಎಂದು ಉಲ್ಲೇಖಿಸುವಂತೆ ಇಲಾಖೆಯಿಂದ ಬಂದಿರುವ ಆದೇಶದ ಬಗ್ಗೆ ಮಾಹಿತಿಯನ್ನು ನೀಡಿದರು.
ಅಲ್ಲದೆ ತಮ್ಮ ತಮ್ಮ ಪರಿಸರಗಳಲ್ಲಿ ಏನಾದರೂ ಸಮಸ್ಯೆಗಳು ಉಂಟಾದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದರು.ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ಪ್ರತ್ಯೇಕ ಗಮನ ವಹಿಸುವಂತೆ ಮತ್ತು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗಳಿಗೆ ಕಳುಹಿಸುವ ಬಗ್ಗೆ,ಯಾವುದಾದರೂ ನಡೆಯ ಬಾರದಂತ ಘಟನೆಗಳು ನಡೆದರೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಕುರಿತು ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಅನೇಕರು ತಮ್ಮ ತಮ್ಮ ಪರಿಸರದ ನಾನಾ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ನೀಡಿದರು.
ಸಭೆಯಲ್ಲಿ ಮುಖಂಡರುಗಳಾದ ನಂದರಾಜ್ ಸಂಕೇಶ್, ಶ್ರೀಮತಿ ಸರಸ್ವತಿ ಬೊಳಿಯ ಮಜಲು,ಮೋಹನ್ ಕುಮಾರ್ ಅಡ್ಕಬಳೆ ,ರಮೇಶ್ ಕೊಡಂಕೇರಿ, ವಿಶ್ವನಾಥ್ ಶಿವಾಜಿನಗರ, ಆನಂದ ಆಲೆಟ್ಟಿ,ಮಂಜುನಾಥ್ ಬಳ್ಳಾರಿ, ಎಸ್ ಕೋಮಗನ್ ಕ್ರೂಸ್, ಮಲ್ಲೇಶ್, ಶಿವಕುಮಾರ್ ಕಂದಡ್ಕ, ಪುಟ್ಟಣ್ಣ ವಾಲ್ಕಜೆ,
ಬಾಬು ಕೆ ಎಂ, ಚಂದ್ರಶೇಖರ್ ಪಲ್ಲತಡ್ಕ, ಕರುಣಾಕರ ಪಿ ಆರ್, ಜಯಂತ ಮೇನಾಲ, ಗೋಪಾಲ ಕರಿಯಮೂಲೆ ಸೇರಿದಂತೆ ಅನೇಕ ಮಂದಿ ಭಾಗವಹಿಸಿದ್ದರು.