ಸಂಪೂರ್ಣ ನಿರ್ಧಾರ ಐತಿಹಾಸಿಕ : ನಿತ್ಯಾನಂದ ಮುಂಡೋಡಿ














ಸಚಿವ ಸಂಪುಟ ಸಭೆಯನ್ನು ಮಂಗಳೂರಲ್ಲಿ ಮಾಡಿದ್ದೇ ಐತಿಹಾಸಿಕವಾದುದು. ಅದರೊಂದಿಗೆ ತುಳುಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಸ್ಥಾನಮಾನ ಕೊಟ್ಟಿರುವುದು ಕೂಡಾ ಐತಿಹಾಸಿಕವಾದುದು. ಪುತ್ತೂರಿನಲ್ಲಿ ಸ್ಥಾಪಿಸಲು ಉದ್ಧೇಶಿಸಿದ್ದ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜ್ಗೆ ೫೫೦ ಕೋಟಿ ಕೊಡಲು ನಿರ್ಧರಿಸಿರುವುದು ಜಿಲ್ಲೆಯ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ ೧೬೦೦ ಕೋಟಿ ನೀಡಲು ನಿರ್ಧರಿಸಿರುವುದು ಅತ್ಯುತ್ತಮ ನಿರ್ಧಾರ.
ಸುಳ್ಯದ ಅಭಿವೃದ್ಧಿಗೆ ನಾವು ಹಲವು ಸಲಹೆಗಳನ್ನು ನೀಡಿದ್ದೇವೆ. ಈಗಾಗಲೇ ೧೬೦೦ ರೂ. ರಸ್ತೆ ಅಭಿವೃದ್ಧಿಗೆ ನಿಗದಿಪಡಿಸಿರುವುದರಲ್ಲಿ ಸುಳ್ಯ -ಕೊಡಿಯಾಲಬೈಲು ರಸ್ತೆ ಹಾಗೂ ಬೊಳಿಯಮಜಲು ಸೇತುವೆಗೆ ಅನುದಾನ ಖಂಡಿತ ಸಿಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರನ್ನು ಜಿಲ್ಲೆಯ ಒಕ್ಕಲಿಗ ಸಮಾಜದ ಮುಖಂಡರು ಹೋಗಿ ಸುಳ್ಯಕ್ಕೆ ಕರೆದಿದ್ದೇವೆ. ಅವರು ಶೀಘ್ರವೇ ಬರಲಿದ್ದು ಆಗ ಸುಳ್ಯದ ಬೇಡಿಕೆಗಳ ಬಗ್ಗೆ ಸ್ಪಂದಿಸಲಿದ್ದಾರೆ.
– ನಿತ್ಯಾನಂದ ಮುಂಡೋಡಿ
ಸ್ಥಾಪಕಾಧ್ಯಕ್ಷರು, ಗೌಡರ ಯುವ ಸೇವಾ ಸಂಘ ಸುಳ್ಯ







