ನಿಡ್ವಾಳ ಶ್ರೀ ಮಹಾವಿಷ್ಣು ದೇವಳದ ಪುನರ್ ನಿರ್ಮಾಣ ಸಮಿತಿಯ ಲೆಕ್ಕಪತ್ರ ಮಂಡನೆ ಸಭೆ

0

ಮಹಾವಿಷ್ಣು ದೇವಸ್ಥಾನ ನಿಡ್ವಾಳ
ಎಣ್ಮೂರು-ಐವತ್ತೊಕ್ಲು, ಕರಿಕ್ಕಳ
ಇದರ ಪುನರ್ ನಿರ್ಮಾಣ ಸಮಿತಿಯ ಲೆಕ್ಕಪತ್ರ ಮಂಡನೆ ಸಭೆ ಸೆ. 20.ರಂದು ನಡೆಯಿತು. ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷರಾದ ನೇಮಿರಾಜ ಪಲ್ಲೋಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಪ್ರಕಾಶ್ ಕಂಬಳ ಉಪಸ್ಥಿತರಿದ್ದರು. ಪುನರ್ ನಿರ್ಮಾಣದ ಸಮಿತಿಯ ಕಾರ್ಯದರ್ಶಿ ಕುಸುಮಾಧರ ಕರಿಮಜಲು ಲೆಕ್ಕಪತ್ರ ಮಂಡಿಸಿದರು.

ಊರ ಪರ ಊರ ಭಕ್ತರಿಂದ ರೂ.2,14,77,144
ಧನ ಸಂಗ್ರಹಿಸಲಾಗಿದ್ದು ಮತ್ತು ಬ್ರಹ್ಮಕಲಶೋತ್ಸವದಲ್ಲಿ ಉಳಿಕೆ ಮೊಬೈಲಗು ರೂ.18,16,220 ಜಮೆಯಾಗಿದ್ದು,ಜುಮ್ಲಾ.ರೂ.2,32,93,364 ಸಂಗ್ರಹವಾಗಿರುತ್ತದೆ.
ದೇಗುಲದ ಪುನರ್ ನಿರ್ಮಾಣದ ಅಂಗವಾಗಿ ನಾಗನಕಟ್ಟೆ, ಬಾಲಾಲಯ ನಿರ್ಮಾಣ ಹಳೆಯ ದೇಗುಲ ತೆರವು, ನೂತನ ಶಿಲಾಮಯ ಗರ್ಭಗುಡಿಯು ಮತ್ತು ತೀರ್ಥ ಮಂಟಪ ಹಾಗೂ ಚಾವಣಿಗೆ ತಾಮ್ರದ ಹೊದಿಕೆ ಅಳವಡಿಕೆ,ತೀರ್ಥಬಾವಿ, ಶಿಲಾಮಯ ಸುತ್ತುಗೋಪುರ, ಚಾಮುಂಡಿ ದೈವದ ಗುಡಿ, ದೈವಗಳ ಕಟ್ಟೆ,ತಡೆಗೋಡೆ ನಿರ್ಮಾಣ,ಹೊರಾಂಗಣಕೆ ಹಾಸುಕಲ್ಲು ಹಾಗೂ ಹೋರಾಂಗಣದ ಕಾoಪೌಂಡ್,ಶೌಚಾಲಯ, ಭೂಮಿ ಸಮತಟ್ಟು ಇತ್ಯಾದಿ ಕೆಲಸಗಳಿಗೆ ಜುಮ್ಲಾ ರೂ.2,43,41,440 ಖರ್ಚಾಗಿದ್ದು,ರೂ.10,48,076 ಜಮೆಗಿಂತ ಹೆಚ್ಚು ಖರ್ಚಾಗಿರುವುದನ್ನು ತಿಳಿಸಿ ಲೆಕ್ಕ ಪತ್ರವನ್ನು ಮಂಡಿಸಿದರು.
ಸದ್ರಿ ಲೆಕ್ಕ ಪತ್ರವನ್ನು ಸರ್ವಾನುಮತದಿಂದ ಮಂಜೂರು ಮಾಡಲಾಯಿತು.ಹಾಗೂ ಲೆಕ್ಕಪತ್ರದ ಪ್ರತಿ ಹಾಗೂ ದಾಖಲೆಗಳನ್ನುಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಪ್ರಕಾಶ್ ಕಂಬಳ ಇವರಿಗೆ ಹಸ್ತಾಂತರಿಸಲಾಯಿತು. ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳು ಪುನರ್ ನಿರ್ಮಾಣ ಸಮಿತಿಯ ಪದಾಧಿಕಾರಿಗಳು, ಸದಸ್ಯರು,ಬೈಲುವಾರು ಸಮಿತಿಯ ಸಂಚಾಲಕರು, ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರು ಹಾಗೂ ಊರಿನ ಭಕ್ತರು ಉಪಸ್ಥಿತರಿದ್ದರು. ಪುನರ್ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಕುಸುಮಾದರ ಕರಿಮಜಲು ವಂದಿಸಿದರು .