
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ತುಳಸಿ ಸ್ತ್ರೀಶಕ್ತಿ ಗೊಂಚಲು ಸಮಿತಿ ಐವತ್ತೊಕ್ಲು ಮತ್ತು ಕೂತ್ಕುಂಜ, ಪಂಜ ಗ್ರಾಮ ಪಂಚಾಯತ್ ವತಿಯಿಂದ ಪೌಷ್ಟಿಕ ಆಹಾರ ಸಪ್ತಾಹ, ರಾಷ್ಟ್ರೀಯ ಪೋಷಣ್ ಮಾಸಾಚರಣೆ, ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ , ಏಳು ತಿಂಗಳ ನಂತರದ ಮಗುವಿಗೆ ಅನ್ನ ಪ್ರಾಶನ ಕಾರ್ಯಕ್ರಮ ಸೆ. 18 ರಂದು ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೀರ್ತಿಪ್ರಸಾದ್ ಸಿ.ಎಂ ಉದ್ಘಾಟಿಸಿದರು.















ವೇದಿಕೆಯಲ್ಲಿ ಗೊಂಚಲಿನ ಅಧ್ಯಕ್ಷೆ ಶ್ರೀಮತಿ ತೀರ್ಥಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಇಲಾಖೆಯ ಪಂಜ ವಲಯ ಮೇಲ್ವಚಾರಕಿ ಶ್ರೀಮತಿ ರವಿಶ್ರೀ ಕೆ, ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ತೇಜಶ್ರೀ, ವೈದ್ಯಾಧಿಕಾರಿ ಡಾ iತೇಜಸ್ವಿ, ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ರಾಹೇಲಮ್ಮ, ಕಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಪವಿತ್ರ ಜೆ, ಪಂಜ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾ ಕುಮಾರಿ ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ರವಿಶ್ರೀ ಕೆ. ಇವರು ಆಹಾರ ವೈವಿಧ್ಯತೆ ಮತ್ತು ಸಮತೋಲನ, ಆಹಾರ ಸಿರಿ ಧ್ಯಾನ ಧಾನ್ಯ, ಬೇಳೆ,ತರಕಾರಿಗಳು ಆಹಾರದ ಗುಣಮಟ್ಟ ಮಕ್ಕಳ ಬೆಳವಣಿಗೆಯ ಮೈಲುಗಲ್ಲು,ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮಹಿಳಾ ಸಹಾಯವಾಣಿ 181, ಸ್ವಚ್ಛತಾ ಪ್ರತಿಜ್ಞಾ ವಿಧಿಗಳ ಬಗ್ಗೆ ಮಾತನಾಡಿದರು.
ತೇಜಶ್ರೀ ಇವರು ಪೌಷ್ಟಿಕಾಂಶದ ಆಹಾರದ ಬಗ್ಗೆ.ಹೇಗೆ ಆರೋಗ್ಯ ಕಾಪಾಡಿ ಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.
ಪೌಷ್ಟಿಕ ಆಹಾರವನ್ನು ಹಾಗೂ ಸ್ಥಳೀಯ ಲಭ್ಯವಿರುವ ವಿವಿಧ ಬಗೆಯ ತಿನಿಸುಗಳು, ಪಾನೀಯಗಳನ್ನು ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು ತಯಾರಿಸಿ ಪೌಷ್ಟಿಕ ಆಹಾರದ ಸ್ಪರ್ಧೆ ನಡೆಸಿ ಬಹುಮಾನವನ್ನು ವಿತರಿಸಲಾಯಿತು.

ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇಕಡ 80ಕ್ಕಿಂತ ಅಧಿಕ ಅಂಕ ಗಳಿಸಿದ ಸ್ತ್ರೀ ಶಕ್ತಿ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.
ಆರೋಗ್ಯ ಕಾರ್ಯಕರ್ತೆಯರಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.
ಸ್ವಚ್ಛತಾ ಪ್ರತಿಜ್ಞೆಯನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್ ಸಿ ಎಂ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರತ್ನಾವತಿ ಬೊಳ್ಳಾಜೆ ಪ್ರಾರ್ಥಿಸಿದರು. ಶ್ರೀಮತಿ
ವೇದಾವತಿ ಪಲ್ಲೋಡಿ ಸ್ವಾಗತಿಸಿದರು. ಶ್ರೀಮತಿ ಹೇಮಲತಾ ನಾಗತೀರ್ಥ ನಿರೂಪಿಸಿದರು. ಶ್ರೀಮತಿ ಸೇಲಿನಾ ಡಿ ಸೋಜ ವಂದಿಸಿದರು.
ಕಾರ್ಯಕ್ರಮದಲ್ಲಿ ಪಂಜ ಪಂಚಾಯತ್ ಗೆ ಒಳಬಟ್ಟ ಕರಿಕಳ,ಅಡ್ಡತ್ತೋಡು, ಪಾಂಡಿಗದ್ದೆ, ನಾಗತೀರ್ಥ ಮತ್ತು ಪಂಜ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು,ಆಶಾ ಕಾರ್ಯಕರ್ತೆಯರು ಸಂಘದ ಸದಸ್ಯರು ಪೋಷಕರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.







