ಮನೆಯವರಿಂದ ಸುಳ್ಯ ಠಾಣೆಯಲ್ಲಿ ದೂರು ಪ್ರಕರಣ ದಾಖಲು
ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ ಸುಳ್ಯ ನ್ಯಾಯಾಧೀಶ














ದುಗಲಡ್ಕ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ದಡಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ನೊಂದ ಬಾಲಕಿಯ ಮನೆಯವರು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಘಟನೆ ಸೆ 23ರಂದು ನಡೆದಿದೆ.
ಆರೋಪಿ ಕಂದಡ್ಕದ ಕೃಷ್ಣಕುಮಾರ್ ಎಂಬಾತ ಮನೆಯಲ್ಲಿ ಇಬ್ಬರು ಬಾಲಕಿಯರು ಮಾತ್ರ ಇದ್ದಾಗ ಆ ಮನೆಗೆ ತೆರಳಿ ಮನೆಯಲ್ಲಿದ್ದ ಹಿರಿಯ ಬಾಲಕಿಯ ಬಳಿ ನಿಮ್ಮ ತಾಯಿಗೆ ಐವತ್ತು ರೂಪಾಯಿ ನಾನು ನೀಡಬೇಕಾಗಿದ್ದು ತಾಯಿ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಈ ಸಂದರ್ಭದಲ್ಲಿ ಮಕ್ಕಳು ಅಮ್ಮ ಮನೆಯಲ್ಲಿ ಇಲ್ಲ ಕೆಲಸಕ್ಕೆ ಹೋಗಿದ್ದಾರೆ ಎಂದು ಹೇಳಿದಾಗ ಬಾಲಕಿಯ ಬಳಿ ಕುಡಿಯಲು ನೀರು ಕೇಳಿದ್ದು ಬಾಲಕಿ ಕುಡಿಯಲು ನೀರು ತಂದು ಕೊಟ್ಟಿರುತ್ತಾರೆ. ಬಳಿಕ ಬಾಲಕಿ ನೀರು ಕೊಟ್ಟ ತಂಬಿಗೆಯನ್ನು ತೆಗೆಯಲು ಹೋದಾಗ ಕೈಹಿಡಿದು ಎಳೆದು ಲೈಂಗಿಕ ಕಿರುಕುಳ ನಡೆಸಿರುವುದಾಗಿ ಈ ಸಂದರ್ಭದಲ್ಲಿ ಬಾಲಕಿಯರು ಬೊಬ್ಬೆ ಹಾಕಿದ್ದು ಆರೋಪಿ ಅಲ್ಲಿಂದ ತೆರಳಿರುತ್ತಾನೆ. ಆದ್ದರಿಂದ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿಕೊಂಡ ಸುಳ್ಯ ಪೊಲೀಸರು ಆರೋಪಿಯ ಮೇಲೆ ಪೋಸ್ಕೊ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.







