ಸುಳ್ಯ ತಹಶೀಲ್ದಾರ್ ಮಂಜುಳಾ ರಿಗೆ ಪದೋನ್ನತಿ

0

ಸುಳ್ಯ
ತಹಸೀಲ್ದಾರ್ ಆಗಿರುವ ಮಂಜುಳಾ ಎಂ. ಅವರಿಗೆ ಮುಂಬಡ್ತಿ ದೊರೆತಿದ್ದು, ಗ್ರೇಡ್‌-1 ವೃಂದದ ಅಧಿಕಾರಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್‌) ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಿಸಿ ಸರಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಸುಳ್ಯ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುಳಾ ಎಂ. ಅವರು ಇದೀಗ ಕೆಎಎಸ್‌ ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಣಗೊಂಡು ಮುಂದಿನ ಆದೇಶದ ವರೆಗೆ ಪ್ರಸ್ತುತ ಹುದ್ದೆಯಲ್ಲಿಯೇ ಮುಂದುವರೆಯಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸುಳ್ಯ ತಹಶಿಲ್ದಾರರಾಗಿರುವ ಇವರು ಪ್ರಸ್ತುತ ಸುಳ್ಯ ನಗರ ಪಂಚಾಯತ್ ಆಡಳಿತಾಧಿಕಾರಿ ಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.