ಜನಸ್ಪಂದನಾ ವೇದಿಕೆಯ ಸಂಚಾಲಕರಿಂದ ಆಗ್ರಹ














ಸುಳ್ಯ ನಗರದ ಪ್ರಮುಖ ರಸ್ತೆಯಲ್ಲಿ ಸಮಸ್ಯೆಗಳು ಹೆಚ್ಚಾಗಿದ್ದು ಅಲ್ಲಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಕಾಲುದಾರಿಗಳು ಕಾಡು ಪೊದೆಯಿಂದ ಆವೃತವಾಗಿದ್ದು ಕೃಷಿ ಭೂಮಿಯಂತಾಗಿದೆ. ರಸ್ತೆಯ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಫುಟ್ ಪಾತ್ ಗಳ ಸ್ಲ್ಯಾಬ್ ಗಳು ಕುಸಿದು ಹೋಗಿ ಪಾದಚಾರಿಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಮಕ್ಕಳು ಹಿರಿಯರು ಹಲವಾರು ಮಂದಿ ಚರಂಡಿ ಬಿದ್ದ ಪ್ರಕರಣಗಳು ವರದಿಯಾಗಿವೆ. ವಾಹನ ಸವಾರರು ಫುಟ್ ಬಾತ್ ನಲ್ಲಿ ವಾಹನ ಪಾರ್ಕಿಂಗ್ ಮಾಡಿದರು ಇಲ್ಲಿ ಯಾರು ಕೇಳುವವರಿಲ್ಲ. ರಸ್ತೆಯ ಸಮಸ್ಯೆ ಕುರಿತು ರಾಜ್ಯ ಹೆದ್ದಾರಿಯವರಲ್ಲಿ ವಿಚಾರಿಸಿದರೆ, ನಗರ ಪಂಚಾಯತ್ ನವರಿಗೆ ತಿಳಿಸಿ ಎಂದು ಹೇಳುತ್ತಾರೆ. ಪಂಚಾಯತ್ ನವರಿಗೆ ತಿಳಿಸಿದಾಗ ನಮಗೆ ಬರುವುದಿಲ್ಲ, ಹೆದ್ದಾರಿ ನಿರ್ವಹಣೆಯವರು ಮಾಡಬೇಕೆಂದು ಹಾರಿಕೆಯ ಉತ್ತರ ನೀಡುತ್ತಾರೆ. ಈ ರಸ್ತೆಯ ಮೂಲಕ ಸ್ಥಳೀಯ ಜನಪ್ರತಿನಿಧಿಗಳು ದಿನಂಪ್ರತಿ ಸಂಚರಿಸುತ್ತಾರೆ. ಆದರೂ ಅವ್ಯವಸ್ಥೆಯ ಬಗ್ಗೆ ಮೌನ ವಹಿಸಿರುವುದು ಯಾಕೆ..? ಈ ಬಗ್ಗೆ ಕೂಡಲೇ ಮುತುವರ್ಜಿ ವಹಿಸಿ ಸಮಸ್ಯೆಗಳನ್ನು
ಸರಿ ಪಡಿಸುವಂತೆ ಜನಸ್ಪಂದನಾ ವೇದಿಕೆಯ ಸಂಚಾಲಕರಾದ ಸುಂದರ್ ರಾವ್ ರವರು ಆಗ್ರಹಿಸಿದ್ದಾರೆ.






