ಶ್ರೀ ಶಾರದಾ ಮಾತೆಯ ಮೆರವಣಿಗೆ- ಪ್ರತಿಷ್ಠೆ

















ಸುಳ್ಯ ಶಾಸ್ತ್ರಿ ವೃತ್ತದ ಬಳಿ ಇರುವ ಜಿ.ಪಂ.ಇಂಜಿನಿಯರಿಂಗ್ ಉಪವಿಭಾಗದ ಆವರಣದಲ್ಲಿ ಶ್ರೀ ಶಾರದಾ ಮಾತೆಗೆ ಪುರೋಹಿತ ನಾಗರಾಜ ಭಟ್ ರವರು ಪೂಜೆ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಶ್ರೀ ಶಾರದಾ ಮಾತೆಯ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಶಾರದಾ ಮಂಟಪದ ವರೆಗೆ ಬಂದು ದೇವಿಯ ಪ್ರತಿಷ್ಠೆ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಸೇವಾ ಸಮಿತಿಯ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಕೆ.ಗೋಕುಲದಾಸ್, ಶ್ರೀ ಶಾರದಾಂಬ ಸೇವಾ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಲೀಲಾಧರ್ ಡಿ.ವಿ., ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಅಧ್ಯಕ್ಷ ನವೀನ್ ಚಂದ್ರ ಕೆ.ಎಸ್., ಎಸ್.6 ಕಾರ್ಯದರ್ಶಿ ಕೆ.ರಾಜು ಪಂಡಿತ್, ಪ್ರಮುಖರಾದ ಎಂ.ವೆಂಕಪ್ಪ ಗೌಡ, ಎನ್.ಜಯಪ್ರಕಾಶ್ ರೈ, ಪಿ.ಎಸ್. ಗಂಗಾಧರ್, ಬೂಡು ರಾಧಾಕೃಷ್ಣ ರೈ, ಸುನಿಲ್ ಕುಮಾರ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲ್, ಜನಾರ್ದನ ದೋಳ, ರೊ.ಲತಾ ಮಧುಸೂದನ್, ತೀರ್ಥರಾಮ ಜಾಲ್ಸೂರು, ಯೋಜನಾಧಿಕಾರಿ ಮಾಧವ ಗೌಡ, ದಿನೇಶ್ ಅಂಬೆಕಲ್ಲು, ವಿಕ್ರಮ್ ಅಡ್ಪಂಗಾಯ, ಕೆ.ಜಿ.ಸತೀಶ್, ಗಣೇಶ್ ಆಳ್ವ ಸುಳ್ಯ,ಶಶಿಧರ ಎಂ.ಜೆ, ಎಂ.ಕೆ.ಸತೀಶ್, ವಾಸುದೇವ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.









