ಸುಳ್ಯ ಸಿ ಜೆ ಮತ್ತು ಹಿರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಎ ಪಿ ಪಿ ಯಾಗಿ ಬಿ. ಜನಾರ್ದನ್ ಕರ್ತವ್ಯಕ್ಕೆ ಹಾಜರು

0

ಎ ಪಿ ಪಿ ಮೋಹನ್ ವೈ ಎಸ್ ಮಾಲೂರು ನ್ಯಾಯಾಲಯಕ್ಕೆ ವರ್ಗಾವಣೆ

ಸುಳ್ಯದ ಹಿರಿಯ ಸಿ ಜೆ ಮತ್ತು ಜೆ ಎಂ ಎಫ್‌ ಸಿ ನ್ಯಾಯಾಲಯಕ್ಕೆ ಸಹಾಯಕ ಸರಕಾರಿ ಅಭಿಯೋಜಕ (ಎ ಪಿ ಪಿ) ರಾಗಿ ಈ ಮೊದಲು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದ ಬಿ ಜನಾರ್ಧನ್ ರವರು ಮರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಎ ಪಿ ಪಿ ಮೋಹನ್ ವೈ ಎಸ್ ರವರು ಮಾಲೂರು ಒಂದನೇ ಅಧಿಕ ಸಿ ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆ ಗೊಂಡಿರುತ್ತಾರೆ.

ಬಿ ಜನಾರ್ಧನ್ ರವರು ಈ ಮೊದಲು ಸುಳ್ಯ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಬಳಿಕ ಮಂಗಳೂರು ಆರನೇ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ವರ್ಗಾವಣೆ ಹೊಂದಿದ್ದರು. ಬಳಿಕ ಮೈಸೂರಿನ ಮೂರನೇ ಅಧಿಕ ಸಿ ಜೆ (ಹಿ ವಿ )ಜೆ ಎಂ ಎಫ್ ಸಿ ನ್ಯಾಯಾಲಯ ಮತ್ತು ಐದನೇ ಜೆ ಎಂ ಎಫ್ ಸಿ ನ್ಯಾಯಾಲಯ ಮೈಸೂರು ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.