ನ.15 ರಂದು ಸುಳ್ಯದಲ್ಲಿ ವರ್ಣ ಚಿತ್ತಾರ ಚಿತ್ರಜಾತ್ರೆ – ಪೂರ್ವಭಾವಿ ಸಭೆ

0

ಕ್ರಿಯೇಟಿವ್‌ ಸ್ಕೂಲ್‌ ಆಫ್‌ ಆರ್ಟ್ಸ್‌ ಸುಳ್ಯ, ರೋಟರಿ ಕ್ಲಬ್‌ ಸುಳ್ಯ, ಇಂಟರ್ಯಾಕ್ಟ್‌ ಕ್ಲಬ್‌ ಸುಳ್ಯ, ರೋಟರಿ ಶಾಲೆ ಸುಳ್ಯ, ಸುದ್ದಿ ಬಿಡಗಡೆ ಪತ್ರಿಕೆ ಹಾಗೂ ಸುದ್ದಿ ವೆಬ್‌ ಸೈಟ್‌, ಸುದ್ದಿ ಚಾನೆಲ್‌ ಮತ್ತು ಸ್ವರ್ಣಂ ಜ್ಯುವೆಲ್ಸ್‌ ಸುಳ್ಯ, ರಿಷಿ ಫ್ಯಾನ್ಸಿ & ಟಾಯ್ಸ್‌ ಸುಳ್ಯ ಇದರ ಸಹಯೋಗದೊಂದಿಗೆ ವರ್ಣಚಿತ್ತಾರ – 2026 ಚಿತ್ರಜಾತ್ರೆ ಕಾರ್ಯಕ್ರಮ ನ.15ರಂದು ನಡೆಯಲಿದ್ದು ಅದರ ಪೂರ್ವಭಾವಿ ಸಭೆಯು ಕ್ರಿಯೇಟಿವ್‌ ಸ್ಕೂಲ್‌ ಆಫ್‌ ಆರ್ಟ್ಸ್‌ ಸುಳ್ಯ ಇಲ್ಲಿ ಅ.18ರಂದು ನಡೆಯಿತು. ಚಿತ್ರಕಲಾ ಶಿಕ್ಷಕರಾದ ಶ್ರೀಹರಿ ಪೈಂದೋಡಿ ಪೋಷಕರನ್ನು ಸ್ವಾಗತಿಸಿ ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು. ಈ ಬಾರಿ ವರ್ಣಚಿತ್ತಾರ ಚಿತ್ರಕಲಾ ಸ್ಪರ್ಧೆಯ ಜೊತೆ ಸುಮಾರು ಚಿತ್ರಕಲಾ ಪ್ರದರ್ಶನ ಮಳಿಗೆಗಳಿದ್ದು ಚಿತ್ರಗಳು ಹಾಗೂ ಕರಕುಶಲ ವಸ್ತುಗಳನ್ನು ಮಾರಾಟ ಕೂಡ ಮಾಡಲಾಗುತ್ತದೆ. ಹಾಗೂ ನಾಡಿನ ಹೆಸರಾಂತ ಕಲಾವಿದರು ರಥಬೀದಿಯಲ್ಲಿ ಸ್ಥಳದಲ್ಲೇ ಚಿತ್ರ ಬರೆಯಲಿದ್ದಾರೆ. ಸುಮಾರು 1500 ವಿದ್ಯಾರ್ಥಿಗಳು ಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಗಿಫ್ಟ್ ಹ್ಯಾಂಪರ್‌ ನೀಡಲಾಗುವುದು ಎಂದವರು ತಿಳಿಸಿದರು. ಆರು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ ಭೋಜನದ ನಂತರದ ಪ್ರತೀ ವಿಭಾಗದಲ್ಲಿ ಆಯ್ಕೆಯಾದ ತಲಾ 5 ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದ ಯಶಸ್ವಿಗಾಗಿ ಸ್ಪರ್ಧಾ ಸಮಿತಿ, ಆಹಾರ ಸಮಿತಿ, ಮಳಿಗೆ ಸಮಿತಿ ಮತ್ತು ಕಾರ್ಯಕ್ರಮ ಸಂಯೋಜನಾ ಸಮಿತಿಗಳನ್ನು ರಚಿಸಲಾಯಿತು. ಚಿತ್ರ ಕಲಾ ಶಿಕ್ಷಕರಾದ ಪ್ರಸನ್ನ ಐವರ್ನಾಡು ವಂದಿಸಿದರು.