ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಜತ್ತಪ್ಪರವರು ಮೇ.31 ರಂದು ಸೇವಾ ನಿವೃತ್ತಿಗೊಳ್ಳಲಿದ್ದಾರೆ.
1985 ರಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನೇಮಕಗೊಂಡು 1991 ರವರೆಗೆ ತಾತ್ಕಾಲಿಕವಾಗಿ ಕರ್ತವ್ಯ ನಿರ್ವಹಿಸಿ, ದಿನಾಂಕ : 15-08-1991 ರಲ್ಲಿ ಖಾಯಂ ನೌಕರನಾಗಿ ನೇಮಕಗೊಂಡು ಗುಮಾಸ್ತ ಹುದ್ದೆಗೆ ಮುಂಭಡ್ತಿಯಾಗಿ ನಿರಂತರ 38 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುತ್ತಾರೆ.
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದಲ್ಲಿ ದಿನಾಂಕ :01-06-1963 ರಂದು ಚನಿಯಪ್ಪ ಮೂಲ್ಯ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ 5ನೇ ಮಗನಾಗಿ ಜನಿಸಿದ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಬೆಟ್ಟಂಪಾಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮುಕ್ಕೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣವನ್ನು ಪಡೆದಿರುತ್ತಾರೆ.ಪ್ರೌಢ ಶಿಕ್ಷಣವನ್ನು ಬೆಳ್ಳಾರೆ ಸರಕಾರಿ ಪ್ರೌಢ ಶಾಲೆಯಲ್ಲಿ ಪೂರೈಸಿದರು.
ನಂತರ 6 ವರ್ಷಗಳ ಕಾಲ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು ತಾಲೂಕಿನ ಬೆಟ್ಟಂಪಾಡಿಯವರಾದ ಇವರು ಪ್ರಸ್ತುತ ಬೆಳ್ಳಾರೆ ಪಡ್ಪು ಎಂಬಲ್ಲಿ ನೆಲೆಸಿದ್ದು ಇವರ ಪತ್ನಿ ಶ್ರೀಮತಿ ಲಲಿತಾ ಗೃಹಿಣಿಯಾಗಿದ್ದಾರೆ.
ಪುತ್ರಿ ಚೈತ್ರ,ಪುತ್ರ ಚೇತನ್ ಪಡ್ಪು,ಪುತ್ರಿ ಚೈತನ್ಯ ಪಡ್ಪು ಅಳಿಯ ಶಿವಪ್ರಸಾದ್ ಮೊಮ್ಮಗ ತ್ರೆಯಾಂಶ್ ಅವರೊಂದಿಗೆ ಸಂತಸದ ಜೀವನ ನಡೆಸುತ್ತಿದ್ದಾರೆ.
Home ಪ್ರಚಲಿತ ಸುದ್ದಿ ಮೇ.31 : ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗುಮಾಸ್ತರಾದ ಕೆ.ಜತ್ತಪ್ಪರವರು ನಿವೃತ್ತಿ