ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಅರೋಗ್ಯ ಮತ್ತು ನೈರ್ಮಲ್ಯ ಸಮಿತಿ ಸಭೆಯು ಪಂಚಾಯತ್ ಸಬಾಭವನದಲ್ಲಿ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ರವರು ಅರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅರೋಗ್ಯ ತಪಾಸಣೆ ಮಾಡಲಾಯಿತು. ಕಮ್ಯುನಿಟಿ ಹೆಲ್ತ್ ಆಫೀಸರ್ ಹರ್ಷಿತ ತಪಾಸಣೆ ನಡೆಸಿಕೊಟ್ಟರು. ಗ್ರಾಮದಲ್ಲಿ ಎಲ್ಲಿಯೂ ಕಸ ಕಶ್ಮಲ ವಸ್ತು ಹರಡದಂತೆ ಎಚ್ಚರವಹಿಸುವುದು ಮಳೆಗಾಲ ಆರಂಭ ಹಿನ್ನಲೆ ಅಂಗಡಿ ಮುಂದೆ ಬೊಂಡದ ಚಿಪ್ಪು, ಖಾಲಿ ಬಾಟಲಿ ಇದ್ದರೆ ತೆರವುಗೊಳಿಸುವುದು. ಡೆಂಗ್ಯೂ, ಮಲೇರಿಯಾ ರೋಗ ಹರಡದಂತೆ ಎಚ್ಚರ ವಹಿಸುವುದು.
ಕಸದ ತೊಟ್ಟಿಗಳಿಂದ ಕಸ ತೆರವು ಮಾಡುವುದು. ಆಶಾ, ಅರೋಗ್ಯ ಕಾರ್ಯಕರ್ತರು ಅಲ್ಲಲ್ಲಿ ತೆರಳಿ ಮಾಹಿತಿಯನ್ನು ನೀಡುವುದು, ಕುಡಿಯುವ ನೀರಿನ ಬಗ್ಗೆ ವಾರ್ಡ್ ಮಟ್ಟದಲ್ಲಿ ಸಭೆ ನಡೆಸುವುದು, ಪ್ರತಿ ಮನೆಗೆ ಮೀಟರ್ ಅಳವಡಿಸಿ ನೀರು ಸರಬರಾಜು ಮಾಡುವುದು, ಕುಡಿಯುವ ಬಿಲ್ ಪಾವತಿಗೆ ಬಾಕಿ ಇರುವ ಸಂಪರ್ಕ ಕಡಿತ ಹಲವು ವಿಚಾರದ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸೊಸೈಟಿ ಅಧ್ಯಕ್ಷರು, ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ವಿಮಲಾ, ಅಬೂಸಾಲಿ, ಎಸ್. ಕೆ. ಹನೀಫ್, ವಿಜಯ ಕುಮಾರ್ ಪಂಚಾಯತ್ ಪಂಪ್ ಚಾಲಕರು, ಆಶಾ, ಅರೋಗ್ಯ ಕಾರ್ಯಕರ್ತರು, ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ, ಭರತ್, ಉಮೇಶ್. ಉಪಸ್ಥಿತರಿದ್ದರು