ಮಿತ್ತಡ್ಕ ಶಾಲೆಯ ಎಸ್ ಡಿಎಂಸಿ ವಿವಾದ ಹಿನ್ನೆಲೆ

0

23 ಮಕ್ಕಳು ಬೇರೆ ಶಾಲೆಗೆ ದಾಖಲಿಸಿದ ಪೋಷಕರು

ಮಿತ್ತಡ್ಕ ಶಾಲೆಯ ಎಸ್ ಡಿಎಂಸಿ ವಿವಾದದ ಹಿನ್ನೆಲೆಯಲ್ಲಿ 23 ಮಕ್ಕಳನ್ನು ಇಂದು ಬೇರೆ ಶಾಲೆಗೆ ದಾಖಲಾತಿ ಮಾಡಿದ ಘಟನೆ ವರದಿಯಾಗಿದೆ.

ಮರ್ಕಂಜದ ಮಿತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿಎಂಸಿ ಯೊಳಗಿನ‌ ಮತ್ತು ಶಾಲಾ ಶಿಕ್ಷಕರ ಹೊಂದಾಣಿಕೆ ಕೊರತೆಯಿಂದ ಎದ್ದ ಅಸಮಧಾನಗಳು ತಾರಕ್ಕೇರಿ ಸುಳ್ಯ ಶಿಕ್ಷಣಾಧಿಕಾರಿಗಳು ಶಾಲೆಗೆ ಬಂದು ಸಭೆ ನಡೆಸಿ ಎಸ್ ಡಿಎಂಸಿಯನ್ನು ಬರಖಾಸ್ತು ಗೊಳಿಸಿ ಹೊಸ ಎಸ್ ಡಿಎಂಸಿ ರಚಿಸುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೆ ಶಿಕ್ಷಣಾಧಿಕಾರಿಗಳು ಕಾನೂನು ಪಾಲನೆ ಮಾಡದೆ ಸಭೆ ನಡೆಸಿದ್ದಾರೆ ಎಂದು ಅಪಾದಿಸಿ ಪತ್ರಿಕಾಗೋಷ್ಠಿಯನ್ನು ಕೆಲ ಪೋಷಕರು ಕರೆದು ಈ ಬಗ್ಗೆ ಕಾನೂನು ಹೋರಾಟ ಮಾಡಯವಂತೆ ಮತ್ತು ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಸುತ್ತೇವೆ ಎಂದಿದ್ದರು. ಇದರ ಬೆನ್ನಲ್ಲೆ ಇಂದು ಶಾಲಾರಂಭವಾದ ದಿನವೇ ಮಿತ್ತಡ್ಕ ಶಾಲೆಯಿಂದ 23 ಮಕ್ಕಳನ್ನು ಮುಡ್ನೂರು‌ ಮರ್ಕಂಜ ಶಾಲೆಗೆ ಸೇರ್ಪಡೆಗೊಳಿಸಿದ್ದಾರೆ. ಅಷ್ಟೆ ಅಲ್ಲದೇ ಈ ವರ್ಷ ಮಿತ್ತಡ್ಕ ಶಾಲೆಗೆ ಕೊಡಲು ಯೋಜನೆ ರೂಪಿಸಿದ್ದ ದಾನಿಗಳ ಸಹಾಯಧನದಿಂದ ಪಡೆದ ಪುಸ್ತಕವನ್ನು ಮುಡ್ನೂರು‌ ಮರ್ಕಂಜ ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸಲಾಯಿತು.