ವಿದ್ಯಾರ್ಥಿಗಳು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಿ : ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್
ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು.ಹೆಚ್ಚು ಪುಸ್ತಕಗಳನ್ನು ಓದಿದರೆ ಮಾತ್ರ ತಮ್ಮ ಸ್ರಜನ ಶೀಲತೆಯನ್ನು ಬರಣಿಗೆ ಮೂಲಕ ಪ್ರಕಟಿಸಲು ಸಾಧ್ಯವಾಗುತ್ತದೆ ಎಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.
ಅವರು ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಚೈತನ್ಯ ಸೇವಾಶ್ರಮದ ವತಿಯಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ಲೇಖನಾ ಸಾಮಗ್ರಿ ಗಳನ್ನು ವಿತರಿಸಿ ಮಾತನಾಡಿದರು.
“ಇಂದು ಆಶ್ರಮದಲ್ಲಿ ಸ್ವಾಮಿಗಳು ಉಚಿತವಾಗಿ ಬರೆಯುವ ಪುಸ್ತಕ ನೀಡಿದ್ದಾರೆ.
ಈ ಪುಸ್ತಕದ ಪ್ರತಿಯೊಂದು ಪುಟವನ್ನು ವಿದ್ಯಾರ್ಥಿಗಳು ಉಪಯೋಗಿಸಿದ್ದಾಗ ಅವರ ಸೇವೆಗೆ ಫಲ ದೊರೆಯುತ್ತದೆ” ಎಂದು ಹೇಳಿದರು.
ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಅವರು ಮಾತನಾಡಿ “ಮಾನವನಿಗೆ ಮಾನವೀಯತೆ ದೊಡ್ಡದು.ತನ್ನಿಂದಾದ ಸಹಕಾರವನ್ನು ಎಲ್ಲರೂ ಸಮಾಜಕ್ಕೆ ನೀಡಬೇಕು.ತಾನು ನೀಡಿದ ಸಣ್ಣಕೊಡುಗೆಯನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬಾಳಿ” ಎಂದು ಹೇಳಿದರು.
ಅಜ್ಜಾವರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗೋಪಿನಾಥ್ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯ ಸೇವಾಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಕ್ರತಿ ಆನಂದವೇ ಬ್ರಹ್ಮವನ್ನು ಕವಯತ್ರಿ ಸಾಹಿತಿ ವಿಮಲ ಅರುಣ ಪಡ್ಡಂಬೈಲು ಬಿಡುಗಡೆಗೊಳಿಸಿ ಮಾತನಾಡಿ ಸ್ವಾಮೀಜಿ ಕ್ರತಿ ಜೀವನಕ್ಕೆ ಬೇಕಾದ ಉತ್ತಮ ಆದರ್ಶಗಳನ್ನು ಹೊಂದಿವೆ.
ಅವರ ಸಮಾಜ ಸೇವಾ ಮನೋಭಾವನೆ ಇತರರಿಗೆ ಆದರ್ಶವಾಗಿದೆ.ಸಾಹಿತ್ಯಗಳು ಸಾಹಿತಿಗಳ ಸುಪ್ತ ಭಾವನೆಗಳನ್ಬು ಹೊರ ಹಾಕುತ್ತವೆ ಎಂದು ಹೇಳಿದರು.
ಪೇರಾಲು ಶಾಲೆಯ ಶಿಕ್ಷಕಿ ಸುನಂದಾ,ಅಡ್ಪಂಗಾಯ ಶಾಲೆಯ ಶಿಕ್ಷಕಿ ಧನಲಕ್ಷ್ಮಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಆಶ್ರಮದ ಟ್ರಸ್ಟಿಗಳಾದ ಕುಶಾಲಪ್ಪ ಗೌಡ ಅತ್ಯಾಡಿ,ಶಂಕರ್ ಪೆರಾಜೆ ಹಾಗೂ ಸ್ಥಳೀಯರಾದ ಮೇಘಶ್ಯಾಮ್ ಅಡ್ಪಂಗಾಯ,ವಿದ್ಯಾರ್ಥಿ ಗಳು ಶಿಕ್ಷಕರು ಉಪಸ್ಥಿತರಿದ್ದರು.
ಚೈತನ್ಯ ಸೇವಾಶ್ರಮದ ಕಾರ್ಯಕ್ರಮ ವ್ಯವಸ್ಥಾಪಕರಾದ ಅನಿಲ್ ಬಿ.ವಿ ಕಾರ್ಯಕ್ರಮ ನಿರೂಪಿಸಿ,ಟ್ರಸ್ಟಿ ಪ್ರಣವಿ ವಂದಿಸಿದರು.