ಗೂನಡ್ಕದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಅಲ್ ಬಿರ್ರ್ ಇಸ್ಲಾಮಿಕ್ ಪ್ರಿ ಸ್ಕೂಲ್ ಶುಭಾರಂಭ

0

ಗೂನಡ್ಕದ ತೆಕ್ಕಿಲ್‌ ಮಾದರಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ವ್ಯವಸ್ಥೆಯಾದ ಅಲ್-ಬಿರ್ ಇಸ್ಲಾಮಿಕ್ ಪ್ರಿ ಸ್ಕೂಲ್ ಜೂ.11 ರಂದು ಪ್ರಾರಂಭಗೊಂಡಿತು.


ತೆಕ್ಕಿಲ್ ಮಾದರಿ ಶಾಲೆಯ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,ಕಲ್ಲುಗುಂಡಿ ಮಸೀದಿ ಖತೀಬರಾದ ನಹೀಮ್ ಪೈಝಿ,ಜಲೀಲ್ ಸಖಾಫಿ ದೇವರಕೊಲ್ಲಿ ಉದ್ಘಾಟಿಸಿದರು.
ಪೇರಡ್ಕ ಜುಮ್ಮಾ ಮಸೀದಿ ಖತೀಬರಾದ ರಿಯಾಜ್ ಪೈಝಿ ದುವಾಶಿರ್ವಚನ ನೀಡಿದರು.


ಪ್ರೀ ಸ್ಕೂಲ್ ತರಗತಿ ಕೊಠಡಿಯನ್ನು ಸಂಪಾಜೆ ಗ್ರಾ.ಪಂ ಅಧ್ಯಕ್ಷ ಜಿ.ಕೆ ಹಮೀದ್ ಉದ್ಘಾಟಿಸಿದರು.

ಸುಳ್ಯ ತಾಲೂಕಿನಲ್ಲಿ ಪ್ರಥಮ ಬಾರಿಗೆ ಅಲ್ ಬಿರ್ ಪ್ರಿ ಸ್ಕೂಲ್ ಅಂತಾರಾಷ್ಟ್ರೀಯಮಟ್ಟದ ಶಿಕ್ಷಣ ವ್ಯವಸ್ಥೆ ಇದಾಗಿದ್ದು ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ನಡೆಯಲಿದೆ. ಈ ವರ್ಷದಿಂದ ಎಲ್‌ಕೆಜಿ ತರಗತಿಗಳು ನಡೆಯಲಿದ್ದು 24 ಮಕ್ಕಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಈ ವರ್ಷ ಎಲ್‌ಕೆಜಿ ಪೂರ್ತಿ ಮಾಡಿದ ಮಕ್ಕಳು ಯುಕೆಜಿಗೆ ಸೇರ್ಪಡೆಯಾಗುತ್ತಾರೆ. ಕನ್ನಡ, ಇಂಗ್ಲೀಷ್, ಅರೆಬಿಕ್ ಭಾಷಾ ಶಿಕ್ಷಣ ನೀಡಲಾಗುವುದು. ಅದಕ್ಕೆ ಸ್ಮಾರ್ಟ್ ಕ್ಲಾಸ್ ತರಗತಿಗಳು ಸಿದ್ಧಗೊಂಡಿದೆ ಎಂದು ಅಲ್ ಬಿರ್ರ್ ಇಸ್ಲಾಮಿಕ್ ಪ್ರೀ ಸ್ಕೂಲ್ ಅಧ್ಯಕ್ಷ ಉನೈಸ್ ಪೆರಾಜೆ ಪ್ರಸಾವಿಕ ಮಾತಿನಲ್ಲಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಹೆಚ್ ಎ,ಪೇರಡ್ಕ ಜುಮ್ಮಾ ಮಸೀದಿ ಅಧ್ಯಕ್ಷ ಎಸ್ ಆಲಿ ಹಾಜಿ,ಸಂಪಾಜೆ ಬದ್ರಿಯಾ ಜುಮ್ಮಾ ಅಧ್ಯಕ್ಷ ತಾಜ್ ಮಹಮ್ಮದ್, ಪೆರಾಜೆ ಜುಮ್ಮಾ ಮಸೀದಿ ಅಧ್ಯಕ್ಷ ಶಾಹೀದ್ ಎಂ ಐ,ಸಂಟ್ಯಾರ್ ಪ್ರತಿಷ್ಠಾನ ಅಧ್ಯಕ್ಷ ಅಶ್ರಫ್ ಹೆಚ್ ಎ,ತೆಕ್ಕಿಲ್ ಮಾದರಿ ಶಾಲೆ ಮುಖ್ಯೋಪಾಧ್ಯಾಯ ಸಂಪತ್ ಕುಮಾರ್,
ಗಾಂಧಿನಗರ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಆದಂ ಹಾಜಿ ಕಮ್ಮಾಡಿ,ಸುಳ್ಯ ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಎಸ್ ಎ ಹಮೀದ್ ಹಾಜಿ ಸುಳ್ಯ, ಸುಳ್ಯ ಉದ್ಯಮಿ ಅಬ್ದುಲ್ಲ್ ಖಾದರ್ ಹಾಜಿ ಅಝಾದ್,ತೆಕ್ಕಿಲ್ ಪ್ರತಿಷ್ಠಾನ ಸಂಚಾಲಕ ಜಾವೇದ್ ಟಿ‌.ಎಂ,ಸಾಜಿ ಐ‌ ಜಿ,ಸಾದಿಕ್ ಕುಂಭಕ್ಕೊಡು, ನಿಝಾಂ ಕಡೆಪಾಲ,ಝಾಕೀರ್ ಪೇರಡ್ಕ, ಶಿಹಾಬ್ ಪೆರಾಜೆ,ಮಹಮ್ಮದ್ ಇರ್ಪಾನ್ ಪೇರಡ್ಕ, ಪಿ ಎ ಉಮ್ಮರ್ ಹಾಜಿ ಪೇರಡ್ಕ, ಅಬ್ದುಲ್ ಖಾದರ್ ಹಾಜಿ ಪಟೇಲ್, ಬದ್ರುದ್ದೀನ್ ಪಟೇಲ್,ಸಿದ್ದೀಕ್ ಕೊಕ್ಕೊ ಮೊದಲಾದವರು ಉಪಸ್ಥಿತರಿದ್ದರು.


ಅಶ್ರಫ್ ಗುಂಡಿ ಸ್ವಾಗತಿಸಿ ಸಾದಿಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.