ಅಮರಮುಡ್ನೂರು ಪಂಚಾಯತ್ ನಲ್ಲಿ ಉದ್ಯೋಗ ಖಾತರಿ ಫಲಾನುಭವಿಗಳ ಉಚಿತ ಆರೋಗ್ಯ ತಪಾಸಣೆ

0

ಅಮರಮುಡ್ನೂರು ಗ್ರಾಮ ಪಂಚಾಯತ್ ನಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಪಂಚಾಯತ್ ಸಭಾಭವನದಲ್ಲಿ ಜೂ.15 ರಂದು ನಡೆಯಿತು. ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಮೇಲ್ತೋಟ ರವರು ಚಾಲನೆ ಶಿಬಿರಕ್ಕೆ ನೀಡಿದರು.

ಪಂ.ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಸದಸ್ಯರಾದ ರಾಧಾಕೃಷ್ಣ ಕೊರತ್ಯಡ್ಕ,ದಿವ್ಯ ಮಡಪ್ಪಾಡಿ, ಜನಾರ್ದನ ಪೈಲೂರು, ಸೀತಾ ಹೆಚ್, ಸಮುದಾಯ ಆರೋಗ್ಯ ಅಧಿಕಾರಿ ಶಿಲ್ಪಾ, ಮೋಕ್ಷಿತಾ,ದಿವ್ಯ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಲಲಿತಾ ಹೆಚ್.ಕೆ, ಸುನಿತಾ, ನರೇಗಾದ ಸಂಪನ್ಮೂಲ ವ್ಯಕ್ತಿ ನಮಿತಾ ,ಪಂ.
ಪಿ.ಡಿ.ಒ ದಯಾನಂದ ಪತ್ತುಕುಂಜ ಹಾಗೂ ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಮಾರು 100 ಕ್ಕೂ ಮಿಕ್ಕಿ ಫಲಾನುಭವಿಗಳು ಆರೋಗ್ಯ ತಪಾಸಣೆ ನಡೆಸಿದರು.