ಸುಳ್ಯದ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯ ನೂತನ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಸಮಾರಂಭವು ನಡೆಯಿತು.
ಶಾಲಾ ನಾಯಕಿಯಾಗಿ ಅಮೀನತ್ ಹೈನಾ ತಸ್ನೀನ್, ಉಪನಾಯಕನಾಗಿ ಮಹಮ್ಮದ್ ಹಫೀಜ್, ಸ್ಪೀಕರ್ ಆಗಿ ಶ್ರೇಯಸ್ ಕೆ.ಪಿ, ಗವರ್ನರ್ ಆಗಿ ಶ್ರೀಮಾ ಸೆಕ್ರೆಟರಿಯಾಗಿ ಅನುಜ್ಞಾ, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ರಝೀನ್ ಹಾಗೂ ಇತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಸಿ. ಬಿನೋಮರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲಾ ಸಂಚಾಲಕರಾದ ವಿಕ್ಟರ್ ಡಿ ಸೋಜ ರವರು ಪದಗ್ರಹಣವನ್ನು ನೆರವೇರಿಸಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಿ ಮುಂದೆ ಉತ್ತಮ ಪ್ರಜೆಗಳಾಗಿ ಎಂಬ ಸಂದೇಶವನ್ನು ನೀಡಿದರು.
ಕು. ಪಲ್ಲವಿ ಸ್ವಾಗತಿಸಿ, ಕು. ಜೆಸ್ಸಾ ರಧೀಶ್ ವಂದಿಸಿದರು. ಶಿಕ್ಷಕಿ ಶ್ರೀಮತಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಸವಿತಾ ಯಸ್ ಸಹಕರಿಸಿದರು.