ಈಗಾಗಲೇ 2 ರಾಷ್ಟ್ರ ಹಾಗೂ 2 ವಿಶ್ವ ದಾಖಲೆ ಮಾಡಿರುವ ಸುಬ್ರಹ್ಮಣ್ಯದ ಗೌರಿತಾ ಕೆ. ಜಿ. ಯೋಗಾಸನದ ಮೂಲಕ ಇನ್ನೊಂದು ವಿಶ್ವ ದಾಖಲೆ ಮಾಡಿದ್ದಾರೆ.
ಸುಪ್ತ ವೀರಾಸನದಲ್ಲಿ 54 ನಿಮಿಷ 38 ಸೆಕೆಂಡ್ ಗಳ ಕಾಲ ಇರುವ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ. ಪದ್ಮಾಸನದಲ್ಲಿ ದೀರ್ಘ ಕಾಲ ಇರುವ ಮೂಲಕ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರಾಷ್ಟ್ರ ದಾಖಲೆ ಹಾಗೂ ವಜ್ರಾಸನದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಬದ್ಧ ಕೋನಾಸನದಲ್ಲಿ ಕಲಾಂ ರೆಕಾರ್ಡ್ಸ್ ನಂತಹ ವಿಶ್ವ ದಾಖಲೆ ಸಾಧಿಸಿರುವ ಈಕೆ ಗಿಸಾ ವರ್ಲ್ಡ್ ರೆಕಾರ್ಡ್ ಸಂಸ್ಥೆಯವರು ಆಯೋಜಿಸಿದ ಒಂದು ನಿಮಿಷದಲ್ಲಿ ಅತೀ ಹೆಚ್ಚು ಬಾರಿ ಭುಜಂಗಾಸನ ಮತ್ತು ಪರ್ವತಾಸನ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುತ್ತಾರೆ.
ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ದಂಪತಿಯ ಪುತ್ರಿಯಾಗಿರವ ಗೌರಿತಾ ಕುಮಾರಸ್ವಾಮಿ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿ.