ಎರಡು ವರ್ಷಗಳ ಹಿಂದೆಯಷ್ಟೆ ನೂತನವಾಗಿ ಅಸ್ತಿತ್ವಕ್ಕೆ ಬಂದ ಮುರುಳ್ಯ ಗ್ರಾ.ಪಂ.ನ ನೂತನ ಕಟ್ಟಡ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದ್ದು, ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಕಟ್ಟಡ ಕಾಮಗಾರಿಯನ್ನು ಜೂ. 22ರಂದು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಕು. ಜಾನಕಿ ಮುರುಳ್ಯ ಮತ್ತು ಸದಸ್ಯರು, ಗ್ರಾ.ಪಂ. ಪಿಡಿಒ ಶ್ರೀಮತಿ ಚಂದ್ರಾವತಿ, ಕಾರ್ಯದರ್ಶಿ ಸೀತಾರಾಮ ಸಂಪ್ಯಾಡಿ, ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಗುತ್ತಿಗೆದಾರ ಕರುಣಾಕರ ರೈ, ಪಂಚಾಯತ್ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.