ಪೆರಾಜೆ ಸೊಸೈಟಿ ಚುನಾವಣೆ : ಮತದಾನದಿಂದ ಅನರ್ಹಗೊಂಡಿದ್ದ 80 ಮಂದಿಗೆ ಮತದಾನಕ್ಕೆ ಅವಕಾಶ

0

ಮತದಾನ ಮಾಡಲು ಅನರ್ಹಗೊಂಡಿದ್ದ 80 ಮಂದಿ ಹೈಕೋರ್ಟ್ ಮೆಟ್ಟಿಲೇರಿ ನ್ಯಾಯಾಲಯದ ಮೂಲಕ ಮತದಾನದ ಹಕ್ಕು ಪಡೆದುಕೊಂಡಿದ್ದು ಅವರು ಜೂ.25 ರಂದು ಪೆರಾಜೆ ಸಹಕಾರಿ ಸಂಘದ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಸಹಕಾರಿ ಇಲಾಖೆಯ ನಿಯಮದ ಪ್ರಕಾರ ಸಂಘದ 5 ಮಹಾಸಭೆಗಳಲ್ಲಿ 2 ಮಹಾಸಭೆಗೆ ಭಾಗವಹಿಸದವರಿಗೆ ಸಹಕಾರಿ ಸಂಘದ ಚುನಾವಣೆ ಯಲ್ಲಿ ಮತದಾನದ ಹಕ್ಕು ನಿರಾಕರಿಸಲ್ಪಟ್ಟಿತ್ತು. ಪೆರಾಜೆ ಸಹಕಾರಿ ಸಂಘದಲ್ಲಿ ಒಟ್ಟು 610 ಮಂದಿ ಮತದಾನದಿಂದ ಅನರ್ಹಗೊಂಡಿದ್ದರು.

ಇವರಲ್ಲಿ 80 ಮಂದಿ ತನ್ನ ನೇತೃತ್ವದಲ್ಲಿ ಹೈಕೋರ್ಟ್ ಮೆಟ್ಟಿಲೇರಿ ಮತದಾನದ ಹಕ್ಕು ಪಡೆದಿದ್ದಾರೆ ಎಂದು ಮನು ಪೆರುಮುಂಡ ಸುದ್ದಿಗೆ ತಿಳಿಸಿದ್ದಾರೆ.

ಪೆರಾಜೆ ಸಹಕಾರಿ ಸಂಘದ ಚುನಾವಣೆ ಜೂ.25 ರಂದು ಬೆಳಗ್ಗೆ ಯಿಂದ ಸಂಜೆ ವರೆಗೆ ನಡೆಯಲಿದೆ. ಸಹಕಾರಿ ಸಂಘದಲ್ಲಿ ಒಟ್ಟು 1698 ಮಂದಿ ಸದಸ್ಯರಿದ್ದು, ಅವರಲ್ಲಿ 1088 ಮಂದಿ ಮತದಾನಕ್ಕೆ ಅರ್ಹರಿದ್ದಾರೆ.