ಸರಕಾರಿ ಸಂಬಳ ಪಡೆಯುವ ನಾವು ಲಂಚ ತೆಗೆದುಕೊಳ್ಳದೇ ಕೆಲಸ ಮಾಡುವ ಸಂಕಲ್ಪ ಮಾಡೋಣ : ಬಿ.ಇ.ಒ. ರಮೇಶ್

0

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚ – ಭ್ರಷ್ಟಾಚಾರ ವಿರುದ್ಧದ ಫಲಕ ಅನಾವರಣ

ಸರಕಾರಿ ಸೇವೆಗೆ ಬಂದಿರುವ ನಮಗೆ ಸರಕಾರ ಸಂಬಳ ನೀಡುತ್ತದೆ. ಹೀಗಿರುವಾಗ ನಾವು ಯಾರಿಂದಲೂ ಏನನ್ನೂ ತೆಗೆದುಕೊಳ್ಳದೇ ನಿಸ್ವಾರ್ಥ ಸೇವೆಯೊಂದಿಗೆ ಲಂಚ ಪಡೆಯುವುದಿಲ್ಲ ಎಂದು ಸಂಕಲ್ಪ ಮಾಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದ್ದಾರೆ.

ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರುದ್ಧದ ಆಂದೋಲನಕ್ಕೆ ಜೂ.23 ರಂದು ಬೆಂಬಲ ಸೂಚಿಸಿದ ಅವರು, ಲಂಚ ಭ್ರಷ್ಟಾಚಾರ ವಿರುದ್ಧದ ಫಲಕವನ್ನು ಕಚೇರಿಯಲ್ಲಿ ಅಳವಡಿಸಿ ಮಾತನಾಡಿದರು.

ಭ್ರಷ್ಟಾಚಾರ ಅನ್ನುವುದು ದೊಡ್ಡ ಸಾಮಾಜಿಕ ಪಿಡುಗು. ಇದನ್ನು ಹೋಗಲಾಡಿಸಲು ಎಲ್ಲರೂ ಒಂದಾಗಬೇಕು. ಇಲ್ಲಿ ಲಂಚ ಪಡೆಯುವವನು ಮಾತ್ರ ಅಲ್ಲ, ಕೊಡುವವನಿಗೂ ಶಿಕ್ಷೆ ಆಗಬೇಕು ಎಂದು ಶಿಕ್ಷಣಾಧಿಕಾರಿಗಳು ಹೇಳಿದರು.

ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಆಂದೋಲನದ ಕುರಿತು ವಿವರ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮ್ಯಾನೇಜರ್ ಕಿಶೋರ್ ಕುಮಾರ್, ಅಧೀಕ್ಷಕ ಶಿವಪ್ರಸಾದ್ ‌ಕೆ
ಎಸ್, ರತ್ನಾಕರ್ ಪರಿವಾರ, ಯೋಗೀಶ್ ಭರತ್, ಶಾರದಾ ಕೇರ್ಪಳ ಮೊದಲಾದವರಿದ್ದರು.