Home ಪ್ರಚಲಿತ ಸುದ್ದಿ ಜು.02 : ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

ಜು.02 : ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

0

11 ಮಂದಿ ನಾಮಪತ್ರ ಸಲ್ಲಿಕೆ

ಐವರ್ನಾಡು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯು ಜು.02 ರಂದು ನಡೆಯಲಿದ್ದು 13 ಮಂದಿ ನಿರ್ದೇಶಕರ ಸ್ಥಾನಕ್ಕೆ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.


ಸಾಮಾನ್ಯ ಕ್ಷೇತ್ರದಿಂದ ವಸಂತ ಕುಮಾರ್,ಶ್ರೀನಿವಾಸ ಮಡ್ತಿಲ, ಜಯಂತ ಗೌಡ ಬಿ,ಕೇಶವ ಗೌಡ, ದಯಾನಂದ ಚೆಮ್ನೂರು,ಪೊನ್ನಪ್ಪ ಪಿ, ಚಿದಾನಂದರವರು ನಾಮಪತ್ರ ಸಲ್ಲಿಸಿದ್ದಾರೆ.


ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ನಾಗಪ್ಪ ಪಾಲೆಪ್ಪಾಡಿ,
ಮಹಿಳಾ ಮೀಸಲು ಸ್ಥಾನದಿಂದ ಶ್ರೀಮತಿ ಮಮತ ಮಡ್ತಿಲ, ಶ್ರೀಮತಿ ರೇವತಿ ಬೋಳುಗುಡ್ಡೆ ನಾಮಪತ್ರ ಸಲ್ಲಿಸಿದ್ದಾರೆ.ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ರವಿಕಲಾ ಎನ್.ರವರು ನಾಮಪತ್ರ ಸಲ್ಲಿಸಿದ್ದಾರೆ.


ಜು.02 ರಂದು ಚುನಾವಣೆ ನಡೆಯಬೇಕಾಗಿದ್ದು 13 ಸ್ಥಾನಕ್ಕೆ 11 ಮಂದಿ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧ ಆಯ್ಕೆ ನಡೆಯಲಿದೆ.
ಮಂಗಳೂರು ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ.ರವರು ಚುನಾವಣಾಧಿಕಾರಿಯಾಗಿದ್ದಾರೆ.

NO COMMENTS

error: Content is protected !!
Breaking