ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಇದರ ಅಂಗವಾಗಿ ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಎಂಆರ್‌ಪಿಎಲ್ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಯಶಸ್ವಿ ವಿದ್ಯಾರ್ಥಿ ಜೀವನ ಎಂಬ ವಿಷಯದ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಭಟ್ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.
ಸೂರ್ಯ ನಾರಾಯಣ ಭಟ್‌ರವರು ಮಾತನಾಡಿ ಆತ್ಮ ತೃಪ್ತಿಯ ಜೀವನವನ್ನು ನಡೆಸುವುದೇ ನಮ್ಮ ಬಾಳಿನ ನಿಜವಾದ ಗುರಿಯಾಗಬೇಕು. ಸೂಕ್ತವಾದ ಗುರಿಯನ್ನು ಹೂಂದಿ ಸಾಧಿಸುವುದೇ ನಮ್ಮ ಅಸ್ತಿತ್ವದ ಉzಶವಾಗಿದೆ. ಜೀವನದಲ್ಲಿ ಒಂದು ಉದಾತ್ತ ಗುರಿಯನ್ನು ಇಟ್ಟುಕೊಂಡು, ಅದನ್ನು ಸಾಧಿಸುವ ಯೋಚನೆ ಮತ್ತು ಕನಸನ್ನು ಕಾಣುತ್ತಾ ಜೀವನದ ಆದ್ಯ ಗೆಲುವನ್ನು ಪಡೆಯಬೇಕು ಎಂದರು.
ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸುತ್ತ ಒಬ್ಬ ಆದರ್ಶ ವಿದ್ಯಾರ್ಥಿಯು ಗೆಲುವನ್ನು ಸಾಧಿಸಲು ಅಳವಡಿಸಿಕೊಳ್ಳಲು ಬೇಕಾದ ಐದು ಗುಣಗಳನ್ನು ಉದಾಹರಣೆ ಸಹಿತ ವಿವರಿಸಿದರು. ಇವುಗಳು ಯಾವುದೆಂದರೆ ಕಾಕಚೇಷ್ಠೆ(ಕಾಗೆಯ ಪ್ರಯತ್ನ), ಬಕ ಧ್ಯಾನಂ(ಕೊಕ್ಕರೆಯಂತೆ ಧ್ಯಾನ), ಶ್ವಾನ ನಿದ್ರಾ(ಶ್ವಾನದಂತಹ ಜಾಗೃತಿ), ಅಲ್ಪ ಆಹಾರಿ(ಮಿತ ಆಹಾರ) ಮತ್ತು ಗೃಹತ್ಯಾಗಿ(ಸುಖಲೋಪತೆಯಿಂದ ನಿರ್ಗಮನ). ವಿದ್ಯಾರ್ಥಿಗಳು ತಮ್ಮ ಕೆಲಸದ ಮೇಲೆಯೇ ತಮ್ಮನ್ನು ಕೇಂದ್ರೀಕರಿಸಿಕೊಳ್ಳಬೇಕೇ ವಿನಹ ಸಮಸ್ಯೆಗಳನ್ನು ವೈಭವೀಕರಿಕೊಂಡು ಸಾಧನೆಯನ್ನು ಮರೆಯಬಾರದು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ದೇಚಮ್ಮ ಟಿ.ಎಂ. ಉಪಸ್ಥಿತರಿದ್ದರು. ವಿದ್ಯಾರ್ಥಿ ದೇವಲ್ ಸ್ವಾಗತಿಸಿ, ಸ್ತುತಿ ಭಟ್ ವಂದಿಸಿದರು. ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.