ಪೆರಾಜೆ ಗ್ರಾಮದ ಕುಂಬಳಚೇರಿ ಕುಟುಂಬಸ್ಥರು ನೂತನವಾಗಿ ನಿರ್ಮಿಸಿದ ಕುಟುಂಬದ ಐನ್ ಮನೆಯ ಗೃಹ ಪ್ರವೇಶ ಕಾರ್ಯಕ್ರಮವು ಧಾರ್ಮಿಕ ಪೂಜಾ ವಿಧಿ ವಿಧಾಗಳೊಂದಿಗೆ ನಡೆಯಿತು.



ಜೂ.27 ಮಂಗಳವಾರ ರಾತ್ರಿ ಕುತ್ತಿ ಪೂಜೆ , ಜೂ .28ಕ್ಕೆ ಬೆಳಿಗ್ಗೆ 6.00ರಿಂದ ಗಣಪತಿ ಹೋಮ. ಬೆಳಗ್ಗೆ 9ಕ್ಕೆ ನೂತನ ಐನ್ ಮನೆಯ ಗೃಹ ಪ್ರವೇಶ ಹಾಗೂ ಬಾಲಲಯದಲ್ಲಿ ಇರುವ ಮುಡಿಪು, ಹಾಗೂ ಇತರ ಮನೆ ದೈವಗಳ ಮನೆ ತುಂಬಿಸುವುದು.


ನಂತರ ಮನೆ ಪೂಜೆ (ಮುಡಿಪು ಪೂಜೆ) ಕಾರ್ಯಕ್ರಮ, ಶ್ರೀ ಸತ್ಯನಾರಾಯಣ ದೇವರ ಪೂಜೆ ,ಪ್ರಸಾದ ವಿತರಣೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಕುಂಬಳಚೇರಿ ಕುಟುಂಬದ ಹಿರಿಯರು ಕುಟುಂಬದ ಸದಸ್ಯರು ನೆಂಟರಿಸ್ಟರು ಊರವರು ಹಾಜರಿದ್ದರು.