ಕಾಯರ್ತೋಡಿ : ಸೂರ್ತಿಲ ಶ್ರೀ ರಕ್ತೇಶ್ವರಿ ಕ್ಷೇತ್ರದ ಬ್ರಹ್ಮಕಲಶದ ಲೆಕ್ಕ ಪತ್ರ ಮಂಡನೆ

0

ಸುಳ್ಯ ಕಾಯರ್ತೋಡಿ, ಸೂರ್ತಿಲ ರಕ್ತೇಶ್ವರಿ ಕ್ಷೇತ್ರದ ಬ್ರಹ್ಮಕಲಶವು ಮೇ.21 ಮತ್ತು ಮೇ.22ರಂದು ನಡೆಯಿತು. ಇದರ ಲೆಕ್ಕ ಪತ್ರ ಮಂಡನೆಯು ಜು.02ರಂದು ಸೂರ್ತಿಲ ಅಂಗನವಾಡಿ ವಠಾರದಲ್ಲಿ ನಡೆಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಾ.ಲೀಲಾಧರ್ ವಹಿಸಿದರು. ವೇದಿಕೆಯಲ್ಲಿ ಬ್ರಹ್ಮಕಲಶ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಸೇವಾ ಸಮಿತಿ ಅಧ್ಯಕ್ಷ ಶಶಿಧರ್ ಶೆಟ್ಟಿ ಪಡ್ಪು, ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಗಣೇಶ ಆಳ್ವ, ಪ್ರಧಾನ ಕಾರ್ಯದರ್ಶಿ ಹರೀಶ್ ಉಬರಡ್ಕ, ಬ್ರಹ್ಮಕಲಶ ಸಮಿತಿ ಗೌರವ ಸಲಹೆಗಾರ ವೆಂಕಪ್ಪ ವಕೀಲರು, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷ ಗೋಕುಲ್‌ದಾಸ್, ಸೇವಾ ಸಮಿತಿ ಕಾರ್ಯದರ್ಶಿ ಜಯರಾಮ ನಾಯಕ್ ಸೂರ್ತಿಲ, ಕೋಶಾಧಿಕಾರಿ ಕೃಷ್ಣ ಬೆಟ್ಟ, ಮಹಿಳಾ ಸಮಿತಿ ಅಧ್ಯಕ್ಷೆ ಜಯಕೃಷ್ಣ ಕಾಯರ್ತೋಡಿ, ಕಾರ್ಯದರ್ಶಿ ಸೌಮ್ಯ ಉಪಸ್ಥಿತರಿದ್ದರು. ಸೇವಾ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು.

ಬ್ರಹ್ಮಕಲಶ ಸಮಿತಿ ಕೋಶಾಧಿಕಾರಿ ಲೆಕ್ಕ ಪತ್ರ ಮಂಡಿಸಿದರು. ಜೀಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಸಹಕರಿಸಿದ ಎಲ್ಲಾ ಸಮಿತಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಂದಿನ ಅಭಿವೃದ್ಧಿಯ ಬಗ್ಗೆ ಗೌರವಾಧ್ಯಕ್ಷ ಕೃಷ್ಣ ಕಾಮತ್ ರವರು ಸಭೆಗೆ ವಿವರಿಸಿದರು. ಕಾರ್ಯಕ್ರಮ ನಡೆದ ಬಗ್ಗೆ ವೆಂಕಪ್ಪ ವಕೀಲರು ಮತ್ತು ಗೋಕುಲ್‌ದಾಸ್‌ರವರು ಅಭಿನಂದನೆ ಸಲ್ಲಿಸಿದರು. ಲೆಕ್ಕ ಪತ್ರ ಮಂಡನೆಯ ನಂತರ ಉಳಿಕೆಯಾದ ರೂ.೯ ಲಕ್ಷದಲ್ಲಿ ಮುಂದಿನ ಕಾಮಗಾರಿ ಬಗ್ಗೆ ಸಭೆಗೆ ತಿಳಿಸಲಾಯಿತು. ಸಭೆಯನ್ನು ಉದ್ದೇಶಿಸಿ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಾ.ಲೀಲಾಧರ್‌ರವರು ಕಾರ್ಯಕ್ರಮ ನಡೆದು ಬಂದ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಉಬರಡ್ಕ ವಂದನಾರ್ಪಣೆ ಗೈದರು.

ದೇವಿಪ್ರಸಾದ್ ಕಾಯರ್ತೋಡಿ ಕಾರ್ಯಕ್ರಮ ನಿರೂಪಿಸಿದರು ನಂತರ ಸಹಭೋಜನ ಕಾರ್ಯಕ್ರಮ ನಡೆಯಿತು.