ಜೂ.28 ರಂದು ಇಲಿ ಪಾಷಾಣ ಸೇವಿಸಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಇಂದು ಅಪರಾಹ್ನ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.
ಅರಂತೋಡಿನ ರತ್ನ ಎಂಬವರ ಮಗಳು ರಾಜಶ್ರೀ ಯಾನೆ ರಾಜೇಶ್ವರಿ ಜೂ.28 ರಂದು ರಾತ್ರಿ ಆಕಸ್ಮಿಕವಾಗಿ ಇಲಿ ಪಾಷಾಣ ಸೇವಿಸಿದ್ದರೆನ್ನಲಾಗಿದೆ. ಜೂ.29 ರಂದು ಬೆಳಗ್ಗೆ ಸುಳ್ಯ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಇಂದು ಅಪರಾಹ್ನ 3.30 ಕ್ಕೆ ಆಸ್ಪತ್ರೆಯಲ್ಲಿ ಅವರು ನಿಧನರಾದರು.
ಮೃತರಿಗೆ 27 ವರ್ಷ ವಯಸ್ಸಾಗಿದ್ದು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಹಿಳೆಯ ಪತಿ ನಾಲ್ಕು ವರ್ಷದಿಂದ ಜತೆಗಿಲ್ಲವೆಂದು ಹೇಳಲಾಗಿದೆ.