ಕಳೆದ ಎರಡು ದಿನಗಳಿಂದ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜಯನಗರದ ಕೊಯಿಂಗೋಡಿ ಬಳಿ ಕವಿತಾ ಎಂಬುವವರ ಮನೆಯ ಸಿಟೌಟ್ ಪಕ್ಕದಲ್ಲಿದ್ದ ಬರೆ ಜರಿದು ಬಿದ್ದ ಘಟನೆ ಸಂಭವಿಸಿದೆ.
ಈ ಸಂದರ್ಭ ಮನೆಯ ನಿವಾಸಿಗಳು ಮನೆಯೊಳಗೆ ಇದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.
ಮಣ್ಣು ಜರಿದು ಬಿದ್ದ ಸ್ಥಳ ಸಿಟೌಟಿನ ಪಕ್ಕದಲ್ಲಿದ್ದು ಮಣ್ಣು ಸಿಟೌಟ್ ಬಳಿಯೇ ಬಂದು ರಾಶಿ ಬಿದ್ದಿದೆ. ಆ ಜಾಗದಲ್ಲಿ ಕೆಲವು ಸಂದರ್ಭದಲ್ಲಿ ಮನೆಯವರು ಬೇರೆ ಬೇರೆ ಕೆಲಸ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು ಎನ್ನಲಾಗಿದೆ.
ಬರೆ ಜರಿದು ಬಿದ್ದ ಸ್ಥಳದ ಮೇಲ್ಭಾಗದಲ್ಲಿ ಕುದ್ಪಾಜೆಗೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದ್ದು ಇದರಿಂದ ರಸ್ತೆಯೂ ಕೂಡ ಅಪಾಯಕಾರಿ ಸ್ಥಿತಿಗೆ ಬಂದಿದೆ. ಇನ್ನೂ ಹೆಚ್ಚಾಗಿ ಮಣ್ಣು ಜರಿದು ಬಿದ್ದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.