ಅಂಗನವಾಡಿಗಳ ಪುನಶ್ಚೇತನ – ನೀರಿನ ಸಂರಕ್ಷಣೆಗೆ ಕಾರ್ಯ ಯೋಜನೆ
ಸುಳ್ಯ ರೋಟರಿ ಸಿಟಿಕ್ಲಬ್ ಪದಗ್ರಹಣ ಸಮಾರಂಭ ಜು.13 ರಂದು ಸುಳ್ಯ ರಥಬೀದಿಯಲ್ಲಿರುವ ರೋಟರಿ ಕಮ್ಯುನಿಟಿ ಹ್ ನಲ್ಲಿ ಜರುಗಲಿದೆ ಎಂದು ರೋಟರಿ ಸಿಟಿ ಕ್ಲಬ್ ನೂತನ ಅಧ್ಯಕ್ಷ ಗಿರೀಶ್ ನಾಕೋಡ್ ಹೇಳಿದರು.
ಜು.7 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ರೋಟರಿ ಕ್ಲಬ್ ಸುಳ್ಯ ಸಿಟಿ 2013-14ನೇ ಸಾಲಿನ ಕ್ಲಬ್‌ನ ಎಂಟನೇ ವರ್ಷದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.13ರಂದು ಜರುಗಲಿದ್ದು, ನೂತನ ಅಧ್ಯಕ್ಷರಾಗಿ ರೋ| ಗಿರೀಶ್, ನಾರ್ಕೋಡು, ಕಾರ್ಯದರ್ಶಿಯಾಗಿ ರೊ ಚೇತನ್ ಪಿ.ಯನ್, ಖಜಾಂಜಿಯಾಗಿ ಹೇಮಂತ್ ಕಾಮತ್ ಅಧಿಕಾರ ಸ್ವೀಕಾರ ಮಾಡಿಕೊಳ್ಳಲಿದ್ದಾರೆ. ರೋ! ಆನಂದ ಖಂಡಿಗ ರವರು ಪದಗ್ರಹಣ ನೇರವೇರಿಸಲಿದ್ದು ಮುಖ್ಯ ಅತಿಥಿಗಳಾಗಿ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರೊ ರಾಜೇಂದ್ರ ಕಲ್‌ಬಾವಿ, ವಲಯ 5 ಅಸಿಸ್ಟೆಂಟ್ ಗವರ್ನರ್ ರೋ ನರಸಿಂಹ ಪೈ, ವಲಯ 5 ರ ಝೋನಲ್ ಲೆಫ್ಟಿನೆಂಟ್ ರೂ ಸುಜಿತ್ ಪಿ.ಕೆ, ಗವರ್ನರ್ ವಿಶೇಷ ಪ್ರತಿನಿಧಿ ರೂ ಕೇಶವ ಪಿ.ಕೆ. ಇವರುಗಳು ಭಾಗವಹಿಸಲಿದ್ದಾರೆ.
ಈ ವರ್ಷದ ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷರ ‘ಕ್ರಿಯೇಟ್ ಹೋಫ್ ಇನ್ ದಿ ವರ್ಲ್ಡ್’ ಎಂಬ ದ್ಯೆಯವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ನಮ್ಮ ಜಿಲ್ಲೆ 3181ನ ಗವರ್ನರ್ ರ ಆಶಯದಂತೆ ಅಂಗನವಾಡಿಗಳ ಪುನಶ್ವೇತನ ಮತ್ತು ನೀರಿನ ಸಂರಕ್ಷಣೆ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ. ಈಗಾಗಲೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿ ನಾರ್ಕೋಡು ಇಲ್ಲಿಗೆ 4 ಲಕ್ಷ ವೆಚ್ಚದಲ್ಲಿ ಅಗತ್ಯವಿರುವ ಶೌಚಾಲಯ ನಿರ್ಮಾಣ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದೇ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಇಂಗ್ಲೀಷ್ ಮಾಧ್ಯಮ ತರಗತಿಗಳು ನಿರ್ವಹಣೆಗೆ ಕ್ಲಬ್ ನ ವತಿಯಿಂದ ಹಾಗೂ ಕ್ಲಬ್‌ನ ಪೂರ್ವಾಧ್ಯಕ್ಷರಾದ ರೂ ತೀರ್ಥ ಕುಮಾರ್ ಕುಂಡಡ್ಕರವರ ಸಹಕಾರದೊಂದಿಗೆ ಸುಮಾರು 1.10 ಲಕ್ಷ ದೇಣಿಗೆಯನ್ನು ಪದಗ್ರಹಣ ಸಮಾರಂಭದಂದು ನೀಡುತ್ತಿದ್ದೇವೆ.
ಸುಳ್ಯದ ಹಿರಿಯ ವೈದ್ಯರಾದ ಶಂಕರ್ ಭಟ್ ಹಾಗೂ ರಂಗಮಯೂರಿ ನಿರ್ದೇಶಕ ಲೋಕೇಶ್ ಊರುಬೈಲುರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸಿಟಿಕ್ಲಬ್ ಅಧ್ಯಕ್ಷ ಮುರಳೀಧರ್ ರೈ, ಸಾರ್ಜೆಂಟ್ ಎಟ್ ಆರ್ಮ್ಸ್ ಭುವಿನ್ ಕುಮಾರ್, ಕ್ಲಬ್ ಸರ್ವಿಸ್ ನಿರ್ದೇಶಕ ಶಿವಪ್ರಸಾದ್, ಮೆಂಬರ್ ಶಿಪ್ ಚೇರ್ಮನ್ ಪ್ರಮೋದ್ ಕೆ ಇದ್ದರು.