ಕಂದಡ್ಕ ಸೇತುವೆ ಬಳಿ ಅಪಾಯಕಾರಿ ಮರ- ತೆರವಿಗೆ ಸ್ಥಳೀಯರ ಆಗ್ರಹ

0

ಸುಳ್ಯ – ಸುಬ್ರಹ್ಮಣ್ಯ ಮುಖ್ಯ ರಸ್ತೆ ಯ ಕಂದಡ್ಕದಲ್ಲಿ ಬೃಹತ್ ಮರವೊಂದು ರಸ್ತೆಗೆ ಬಾಗಿ ನಿಂತಿದ್ದು, ಅಪಾಯದ ಮುನ್ಸೂಚನೆ ನೀಡಿದೆ.


ಕಂದಡ್ಕದ ಸೇತುವೆ ಬಳಿ ಏರು ರಸ್ತೆಯ ಬದಿಯಲ್ಲಿ ಈ ಬೃಹತ್ ಮರ ರಸ್ತೆಗೆ ಬಾಗಿ ನಿಂತಿದೆ.ತೀವ್ರ ಮಳೆ ಸುರಿಯುತ್ತಿರುವುದರಿಂದ ರಸ್ತೆಗೆ ಬೀಳುವ ಆತಂಕದಲ್ಲಿ ಸ್ಥಳೀಯರು ಮತ್ತು ಪ್ರಯಾಣಿಕರಿದ್ದಾರೆ. ಸಂಬಂಧಪಟ್ಟವರು ಮರವನ್ನು ತೆರವು ಗೊಳಿಸಬೇಕಾಗಿದೆ.