ಕೂರ್ನಡ್ಕ ಗಡಿ ಪ್ರದೇಶದಲ್ಲಿ ಮೊನ್ನೆ ನೀರು ಪಾಲಾದ ಕೂಲಿ ಕಾರ್ಮಿಕನ ಶೋಧ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸುಳ್ಯ ಅಗ್ನಿಶಾಮಕ ದಳದವರು ಹಾಗೂ ಎಸ್.ಡಿ.ಆರ್.ಎಫ್ ತಂಡದವರು ಮತ್ತೆ ಇಂದು ಬೆಳಗ್ಗೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಎಸ್.ಕೆ.ಎಸ್.ಎಸ್.ಎಫ್, ನ ಅರಂತೋಡು ಕಲ್ಲುಗುಂಡಿ ವಿಖಾಯ ತಂಡದವರು ಕೂಡಾ ನಿನ್ನೆಯಿಂದ ಶೋಧ ಕಾರ್ಯದಲ್ಲಿ ಸಹಕಾರ ನೀಡುತ್ತಿದ್ದಾರೆ.
ನಿನ್ನೆಯಿಂದ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಹೊಳೆಯಲ್ಲಿ ನೀರು ಇಳಿಮುಖವಾಗಿದೆ.