ಕಳೆದ ಒಂದು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬ್ರಹ್ಮರ ಗಯಾ ಮೂಲಕ ಹರಿದು ಬರುವ ನದಿಯ ನೀರಿನ ಹರಿವು ಏರಿಕೆಯಾಗಿ ಕೃಷಿ ತೋಟಕ್ಕೆ ಹಾದುಹೋಗುವ ರಸ್ತೆಯ ಸಂಪರ್ಕ ಕಡಿತಗೊಂಡ ಘಟನೆ ಬೀರಮಂಗಲದಿಂದ ವರದಿಯಾಗಿದೆ.
ಬೀರಮಂಗಿಲ ಮೂಲಕ ಹಾದು ಹೋಗಿ ಅಜ್ಜಾವರ ಗ್ರಾಮದ ಡೆಲ್ಮಾ ಮುಸ್ತಫ ಎಂಬುವರ ಕೃಷಿ ತೋಟಕ್ಕೆ ಸಂಪರ್ಕಿಸುವ ರಸ್ತೆ ಇದಾಗಿದ್ದು ಮಳೆಗೆ ನದಿ ನೀರಿನ ಹರಿವು ಹೆಚ್ಚಾಗಿ ರಸ್ತೆಯ ಬದಿಯ ಬರೆ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.ಇದರೊಂದಿಗೆ ನದಿಯ ಬದಿಯಲ್ಲಿ ಇದ್ದ ಬಾಳೆ ಕೃಷಿ ಮತ್ತು ಅಡಿಕೆ ಕೃಷಿಗೆ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.