ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ತಾಲೂಕು, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ, ಜನಾರ್ದನ ಮಾಸ್ಟರ್ ಗಣಿತ ಕೇಂದ್ರ ಸುಳ್ಯ, ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಸಹಯೋಗದಲ್ಲಿ ಸುಳ್ಯ ತಾಲೂಕಿನ ಗಣಿತ ಶಿಕ್ಷಕರಿಗಾಗಿ ಕಾರ್ಯಗಾರ ಗಣಿತಾಂತರಂಗ ಇಂದು (ಜುಲೈ 10ರಂದು) ಆರಂಭಗೊಂಡಿತು.
ಸುಳ್ಯ ಜನಾರ್ದನ ಮಾಸ್ಟರ್ ಗಣಿತ ಕೇಂದ್ರದ ಅಧ್ಯಕ್ಷ ಎಂ.ಬಿ. ಸದಾಶಿವ ರವರು ಅಧ್ಯಕ್ಷತೆ ವಹಿಸಿದ್ದರು. ಜನಾರ್ದನ ಮಾಸ್ಟರ್ ಗಣಿತ ಕೇಂದ್ರದ ಗೌರವಾಧ್ಯಕ್ಷ ಪದ್ಮಶ್ರೀ ಗಿರೀಶ್ ಭಾರದ್ವಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಂಗಳೂರು ಸಂಪನ್ಮೂಲ ವ್ಯಕ್ತಿ ಟಿ.ಕೆ. ಪ್ರಸನ್ನ ಮೂರ್ತಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಕಾಡುತೋಟ, ಉಪಸ್ಥಿತರಿದ್ದರು.
ಶಾಲಾ ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಸ್ವಾಗತಿಸಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣಿತ ಕೇಂದ್ರದ ಸಂಚಾಲಕ ಡಾ. ಜ್ಞಾನೇಶ್ ಎನ್. ಎ. ವಂದಿಸಿದರು. ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಜುಲೈ 12ರವರೆಗೆ ಕಾರ್ಯಗಾರ ನಡೆಯಲಿದೆ.