ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಕ್ಯಾಂಪ್ಕೋ ಸ್ಥಾಪನಾ ದಿನಾಚರಣೆ

0

ಕ್ಯಾಂಪ್ಕೋ ಸಂಸ್ಥೆ ಸುಳ್ಯ ಶಾಖೆಯಲ್ಲಿ ಜು.11 ರಂದು ಕ್ಯಾಂಪ್ಕೋದ ಸ್ಥಾಪನಾ ದಿನಾಚರಣೆಯನ್ನು ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ನಂತರ ನಿರ್ದೇಶಕರು, ಸದಸ್ಯ ಬೆಳೆಗಾರರು, ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕರೆಲ್ಲರೂ ಕ್ಯಾಂಪ್ಕೋ ಸ್ಥಾಪಕಾಧ್ಯಕ್ಷರಾದ ದಿ. ವಾರಣಾಸಿ ಸುಬ್ರಾಯ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.


ನಿರ್ದೇಶಕರು ಕ್ಯಾಂಪ್ಕೋ ಬೆಳೆದು ಬಂದ ಹಾದಿ, ಕ್ಯಾಂಪ್ಕೋ ಸಂಸ್ಥೆಗೆ ಸದಸ್ಯ ಬೆಳೆಗಾರರ ಕೊಡುಗೆ ಹಾಗೂ ಮುಂದೆ ಯಾವ ರೀತಿ ಸಿಬ್ಬಂದಿ ವರ್ಗದವರು ಕ್ಯಾಂಪ್ಕೋದ ಉನ್ನತಿಗೆ ಕೊಡುಗೆ ನೀಡಬಹುದು ಎಂಬುದರ ಕುರಿತಾಗಿ ವಿವರಿಸಿದರು. ಸಿಬ್ಬಂದಿ ಶ್ರೀಮತಿ ಮಲ್ಲಿಕಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಖಾಧಿಕಾರಿ ಕುಂಞoಬು, ನೌಕರ ವೃಂದದವರು, ಸಿಬ್ಬಂದಿ ವರ್ಗದವರು ಹಾಗೂ ಸದಸ್ಯ ಬೆಳೆಗಾರರಾದ ಮರಿಯಪ್ಪ ಭಟ್, ಗೋಪಾಲಕೃಷ್ಣ ಗೌಡ, ಗಣೇಶ್ ಭಟ್ ಉಪಸ್ಥಿತರಿದ್ದರು. ನೆರೆದಿರುವ ಎಲ್ಲರಿಗೂ ಕ್ಯಾಂಪ್ಕೋ ಚಾಕಲೇಟ್ ನೀಡಲಾಯಿತು.