ಸುಬ್ರಹ್ಮಣ್ಯ ಶ್ರೀ ವಾಸುಕಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ “ವಿಪ್ರಾರ್ಪಣಂ” ಯಕ್ಷಗಾನ ತಾಳಮದ್ದಳೆ

0

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ ಚಾತುರ್ಮಾಸ್ಯ ಪ್ರಯುಕ್ತ ಪೂರ್ವಭಾವಿಯಾಗಿ ಶ್ರೀ ವಾಸುಕಿ ಯಕ್ಷಗಾನ ಮಂಡಳಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ
“ವಿಪ್ರಾರ್ಪಣಂ” ಎಂಬ ಯಕ್ಷಗಾನ ತಾಳಮದ್ದಳೆ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನಡೆಯಿತು.

ಮಠಾಧೀಶರಾದ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು ದೀಪ ಪ್ರಜ್ವಲನ ಗೊಳಿಸಿ ಆಶೀರ್ವಚನ ಗೈದರು.
ಗಣರಾಜ್ ಕುಂಬ್ಳೆ ಯವರು ನೂತನ ಪ್ರಸಂಗ ವಿಪ್ರಾರ್ಪಣಂ ಕುರಿತು ಪ್ರಾಸ್ತಾವಿಕ ಮಾತನಾಡಿದರು. ವಾಸುಕಿ ಯಕ್ಷಗಾನ ಮಂಡಳಿ ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು
ಹಿಮ್ಮೇಳದಲ್ಲಿ ಭಾಗವತರಾಗಿ ಭವ್ಯ ಶ್ರೀ ಕುಲ್ಕುಂದ, ಪ್ರಶಾಂತ ರೈ ಪಲ್ಲೊಡಿ,ಗೋಪಾಲ ಕೃಷ್ಣ ಭಟ್ ದೇವಸ್ಯ, ಚೆಂಡೆ ಮದ್ದಳೆಯಲ್ಲಿ ಲಕ್ಷ್ಮೀಶ ಶಗ್ರಿತ್ತಾಯ, ಬಾಲಸುಬ್ರಹ್ಮಣ್ಯ ಭಟ್ ದೇವಸ್ಯ ಸಹಕರಿಸಿದರು.
ಮುಮ್ಮೇಳದಲ್ಲಿ ರಾಮನಾಗಿ ಗಣರಾಜ್ ಕುಂಬ್ಳೆ, ಸೀತೆಯಾಗಿ ಶ್ರೀಪತಿ ಕಲ್ಲುರಾಯರು, ಲಕ್ಷ್ಮಣನಾಗಿ ಶ್ರೀಕೃಷ್ಣ ಶರ್ಮ, ತ್ರಿಜಟೆ( ಬ್ರಾಹ್ಮಣ) ಯಾಗಿ ಪಕಳಕುಂಜ ಶಾಮ ಭಟ್, ಸುಮತಿ ಯಾಗಿ ವೆಂಕಟೇಶ್ ಭಟ್ ಉಳುವಾನ ಪಾತ್ರಕ್ಕೆ ಮೆರುಗು ತಂದರು.