ಕಾರು ತಯಾರಿಕೆ ಮತ್ತು ಮಾರಾಟದಲ್ಲಿ ನಂ. 1 ಸ್ಥಾನದಲ್ಲಿರುವ ಮಾರುತಿ ಮೋಟಾರ್ ಸಂಸ್ಥೆ ನೂತನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ನೆಕ್ಸಾ ಜಿಮ್ನಿ ವಾಹನವನ್ನು ಇಂದು ಸುಳ್ಯದಲ್ಲಿ ಬಿಡುಗಡೆಗೊಳಿಸಲಾಯಿತು.
ಉದ್ಯಮಿ ಧನಂಜಯ ಅಡ್ಪಂಗಾಯ ನೂತನ ವಾಹನವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮೊದಲ ಗ್ರಾಹಕರಾಗಿ ಪ್ರಧಾನ್ ತಿಮ್ಮಪ್ಪಯ್ಯ ಮುಂಗಡ ನೀಡಿದರು.
ಮಾಂಡೋವಿ ಮೋಟಾರ್ಸ್ ಸುಳ್ಯ ಸೇಲ್ಸ್ ವಿಭಾಗದ ಮುಖ್ಯಸ್ಥರಾದ ಸುರೇಶ್ ಭಟ್, ಸರ್ವಿಸ್ ವಿಭಾಗದ ಮುಖ್ಯಸ್ಥರಾದ ಸುದೇಶ್ ಜೈನ್, ನೆಕ್ಸಾ ಜಿಮ್ನಿ ವಿಭಾಗದ ಸೀನಿಯರ್ ರಿಲೇಶನ್ ಶಿಫ್ ಆಫೀಸರ್ ಶರತ್ ಕೆ, ಸೀನಿಯರ್ ಸರ್ವಿಸ್ ಎಡ್ವೈಸರ್ ಗಳಾದ ದುರ್ಗಾದಾಸ್, ಸಂದೀಪ್, ಅರವಿಂದ, ಪುನೀತ್, ಚರಣ್, ಗುರು ಹಾಗೂ ಎಲ್ಲಾ ಸಹೋದ್ಯೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೆಕ್ಸಾ ಜಿಮ್ನಿ ವಾಹನ 1.5 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದ್ದು, 4×4 ತಂತ್ರಜ್ಞಾನದೊಂದಿಗೆ 9″ ಟವರ್ ಸ್ಕ್ರೀನ್ ಸಿಸ್ಟಮ್, ಇನ್ ಬ್ಯುಲ್ಟ್ ಸುಝುಕಿ ಕನೆಕ್ಟ್, ಹೆಡ್ ಲೈಟ್, ವೈಪರ್ ಹೊಂದಿದೆ