ಜು. 23 : ಮರ್ಕಂಜದಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ

0


ಅಮರ ಸಂಘಟನಾ ಸಮಿತಿ ಸುಳ್ಯ, ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸುಳ್ಯ ಹಾಗೂ ನಾಗ ಸಾನಿಧ್ಯ ಗುಳಿಗ ಸಾನಿದ್ಯ ಮರ್ಕಂಜ ಇದರ ಸಂಯುಕ್ತ ಆಶ್ರಯಯದಲ್ಲಿ ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ವಿದ್ಯಾರ್ಥಿಗಳಿಗೆ ೪ ನೇ ವರ್ಷದ ಕಂಡಡೊಂಜಿ ದಿನ ಕಾರ್ಯಕ್ರಮ ಜು. 23 ರಂದು ಮರ್ಕಂಜದ ಪನ್ನೆಬೈಲು ಎಂಬ ಗದ್ದೆಯಲ್ಲಿ ನಡೆಯಲಿದೆ.


ವಿದ್ಯಾರ್ಥಿಗಳಿಗೆ ಕೆಸರಲ್ಲಿ ಓಟ, ಹ್ಯಾಂಡ್ ಬಾಲ್, ಹಗ್ಗಜಗ್ಗಾಟ, ಮೂರು ಕಾಲಿನ ಓಟ, ಜನಪದ ನೃತ್ಯ ಸ್ಪರ್ಧೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ನೇಜಿ ನೆಡುವ ಮಾಹಿತಿಯನ್ನು ಕೂಡ ಹೇಳಿ ಕೊಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.