ಆರೋಪಿಗಳ ಬಂಧನಕ್ಕೆ ಪೋಲೀಸ್ ಇಲಾಖೆಗೆ ಸೂಚನೆ
ನಾಲ್ಕು ದಿನದ ಹಿಂದೆ ಕಳ್ಳರು ನುಗ್ಗಿ ಚಿನ್ನಾಭರಣ ದೋಚಲಾಗಿದ್ದ ಕನಕಮಜಲು ಬುಡ್ಲೆಗುತ್ತು ಯುರೇಶ್ ರ ಮನೆಗೆ ಜು.20 ರಂದು ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿದರು.
ಘಟನೆಯ ವಿವರ ಪಡೆದ ಬಳಿಕ ಜತೆಗಿದ್ದ ಪೋಲೀಸ್ ಅಧಿಕಾರಿಗಳಿಗೆ ಶೀಘ್ರವೇ ಕಳ್ಳರನ್ನು ಬಂಧಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪಿ.ಸಿ.ಜಯರಾಮ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಪ್ರಮುಖರಾದ ಸುರೇಶ್ ಎಂ.ಹೆಚ್., ಕೀರ್ತನ್ ಕೊಡಪಾಲ, ದಿನೇಶ್ ಮಡ್ತಿಲ, ಶಿವರಾಮ್ ಮೊದಲಾದವರಿದ್ದರು.