ಜಟ್ಟಿಪಳ್ಳದ ಮದ್ರಸ ಕಟ್ಟಡದ ಹಿಂಬದಿ ನಿವಾಸಿ ರೇವತಿ ಎಂಬವರ ಮನೆ ಆವರಣ ಗೋಡೆ ನಿನ್ನೆಯ ಮಳೆಗೆ ಕುಸಿದು ಬಿದ್ದಿದೆ.
ಈ ಕಂಪೌಂಡ್ ಪಕ್ಕದಲ್ಲಿದ್ದ ಕಾಲುದಾರಿಗೆ ಕಂಪೌಂಡ್ ಲೆವೆಲ್ ಗೆ ಮಣ್ಣು ತುಂಬಿಸಿ ಹಿಂಬದಿಯ ಮನೆ ಕಡೆಗೆ ಹೋಗಲು ರಸ್ತೆ ನಿರ್ಮಿಸಿದ್ದರಿಂದ ಮಳೆಯಿಂದಾಗಿ ನೆನೆದು ಕಂಪೌಂಡ್ ಗೆ ಒತ್ತಡ ಉಂಟಾಗಿ ಕುಸಿಯಲು ಕಾರಣವಾಯಿತೆಂದು ಹೇಳಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ನ.ಪಂ. ಮಾಜಿ ಉಪಾಧ್ಯಕ್ಷರ ಪುತ್ರ ಹಾಗೂ ಪಕ್ಕದ ಕಟ್ಟಡದಲ್ಲಿರುವ ನಿವಾಸಿ ಯುವಕರು ಸೇರಿ ಮಳೆ ನೀರು ಹರಿದು ಹೋಗಲು ಬದಲಿ ವ್ಯವಸ್ಥೆ ರೂಪಿಸಿ, ಮಣ್ಣು ಇನ್ನಷ್ಟು ಕೊಚ್ಚಿ ಹೋಗುವುದನ್ನು ತಡೆದರು.