ಚೊಕ್ಕಾಡಿ ಮಯೂರಿ ಯುವತಿ ಮಂಡಲದ ಪದಗ್ರಹಣ ಮತ್ತು ಆರೋಗ್ಯ ಮಾಹಿತಿಕಾರ್ಯಾಗಾರ

0

ಚೊಕ್ಕಾಡಿ ಮಯೂರಿ ಯುವತಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಮಹಿಳೆಯರಿಗೆ ಆರೋಗ್ಯ ಮಾಹಿತಿ ಕಾರ್ಯಗಾರವು ಚೊಕ್ಕಾಡಿಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳಿಗೆ ಸುಳ್ಯ ಯುವಜನ ಸಂಯುಕ್ತ ಮಂಡಳಿಯಕೋಶಾಧಿಕಾರಿ, ವಲಯ ಉಸ್ತುವಾರಿ ನಿರ್ದೇಶಕ ಮುರಳಿ ನಳಿಯಾರು ಪ್ರಮಾಣ ವಚನ ಬೋಧಿಸಿದರು.

ಮಹಿಳೆಯರಿಗೆ ಋತು ಸ್ರಾವದ ಬಗ್ಗೆ ಆರೋಗ್ಯದ ಕುರಿತು ಸ್ತ್ರೀ ರೋಗ ತಜ್ಞ ವೈದ್ಯರಾದ ಡಾ. ವೀಣಾ ರವರು ಮಾಹಿತಿ ನೀಡಿದರು.
ಮಯೂರಿ ಯುವತಿ ಮಂಡಲದ ಅಧ್ಯಕ್ಷೆ ಸ್ವಾತಿ ಪದವು , ಚೊಕ್ಕಾಡಿ ಪ್ರೌಢ ಶಾಲೆ ಕುಕ್ಕುಜಡ್ಕದ ಮುಖ್ಯೋಪಾಧ್ಯಾಯರಾದ ಸಂಕಿರ್ಣ ಎ.ಎಲ್, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಹರ್ಷಿತಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶ್ರೀಮತಿ ಸನ್ನಿಧಿ ಪ್ರಾರ್ಥಿಸಿ, ಪೂರ್ಣಿಮಾ ಸ್ವಾಗತಿಸಿದರು.ಮಧುಶ್ರೀ ಕೇನಡ್ಕ ವಂದಿಸಿ, ಉಷಾಲತಾ ಪಡ್ಪು ಕಾರ್ಯಕ್ರಮ ನಿರೂಪಿಸಿದರು. ಚೊಕ್ಕಾಡಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಹಾಗೂ ಮಯೂರಿ ಯುವತಿ ಮಂಡಲದ ಸದಸ್ಯರು ಭಾಗವಹಿಸಿದರು.