ಸಂಪಾಜೆ ಗ್ರಾಮ ಸಮಗ್ರ ಅಭಿವೃದ್ಧಿಯಾಗಲಿ : ಶಾಸಕಿ‌ ಭಾಗೀರಥಿ ಮುರುಳ್ಯ ಹಾರೈಕೆ

0

ಸಂಪಾಜೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ – ಗಾಂಧಿ‌ ಗ್ರಾಮ ಪುರಸ್ಕಾರ ಹಸ್ತಾಂತರ

ಸಂಪಾಜೆ ‌ಗ್ರಾಮದಲ್ಲಿ ಈಗಾಗಲೇ ರಸ್ತೆ, ಮಾರುಕಟ್ಟೆ, ನೀರು ಸೇರಿ ಮೂಲಭೂತ ಸೌಕರ್ಯಗಳು ಜನರಿಗೆ ದೊರೆಯುತ್ತಿದೆ. ಇನ್ನಷ್ಟು ಕೆಲಸ ಕಾರ್ಯಗಳೊಂದಿಗೆ ಗ್ರಾಮ ಸಮಗ್ರ ಅಭಿವೃದ್ಧಿಯಾಗಲಿ ಎಂದು ಶಾಸಕಿ‌ ಭಾಗೀರಥಿ ಮುರುಳ್ಯ ಹೇಳಿದ್ದಾರೆ.

ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಶುಭಹಾರೈಸಿದರು.

ಸಂಪಾಜೆ ಗ್ರಾಮ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಪ್ರಶಸ್ತಿಯನ್ನು ಸಮಾರಂಭ ದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ರವರು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ‌ಜಿ.ಕೆ. ಹಮೀದ್ ರಿಗೆ ಹಸ್ತಾಂತರಿಸಿದರು.

ಪಂಚಾಯತ್ ನಲ್ಲಿ ನಡೆದ ಸಭಾ ಕಾರ್ಯಕ್ರಮವು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಪಾಜೆ ಗ್ರಾಮದ‌ ನೋಡೆಲ್ ಅಧಿಕಾರಿ, ವಲಯಾರಣ್ಯಾಧಿಕಾರಿ ಮಂಜುನಾಥ್ ಸಭಾಕಾರ್ಯಕ್ರಮ ಉದ್ಘಾಟಿಸಿದರು.
ತೆಕ್ಕಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್.,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಮಣಿಕಂಠ, ಸದಸ್ಯರುಗಳಾದ ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ಜಗದೀಶ್ ರೈ‌ ಕಲ್ಲುಗುಂಡಿ, ಎಸ್.ಕೆ. ಹನೀಫ್, ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ವಿಮಲ ವಿ, ಸುಶೀಲ, ರಜನಿ ಎನ್.ಎಲ್, ಅನುಪಮ ವೇದಿಕೆಯಲ್ಲಿ ಇದ್ದರು.

ಪ್ರಭಾರ ಪಿಡಿಒ ಪದ್ಮಾವತಿ ವೇದಿಕೆಯಲ್ಲಿ ಇದ್ದರು.
ಪಂಚಾಯತ್ ಸದಸ್ಯ ಸೋಮಶೇಖರ್ ಕೊಯಿಂಗಾಜೆ ಸ್ವಾಗತಿಸಿದರು. ಶ್ರೀಮತಿ ಕಾಂತಿ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.