ನಗರ ಪಂಚಾಯತ್ ವತಿಯಿಂದ ಸುಳ್ಯದಲ್ಲಿ ಪ್ಲಾಸ್ಟಿಕ್‌ ಮುಕ್ತ ಅಭಿಯಾನ

0

ಜು.28ರ‌ ಬಳಿಕ ನಿಷೇಧಿತ ಪ್ಲಾಸ್ಟಿಕ್ ‌ಬಳಕೆಗೆ‌ ದಂಡ : ನ.ಪಂ. ಸೂಚನೆ

ಕೇಂದ್ರ ಪುರಸ್ಕತ ಸ್ವಚ್ಛ ಭಾರತ ಮಿಷನ್, 2.0 ಯೋಜನೆಯಡಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 2023ರ ಜು.28ರವರೆಗೆ ಪ್ಲಾಸ್ಟಿಕ್‌ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸುಳ್ಯ , ವ್ಯಾಪ್ತಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು 2016, ಮಾರ್ಚ್ 1ರಿಂದ ನಿಷೇಧಿಸಲಾಗಿದೆ.
ಪ್ಲಾಸ್ಟಿಕ್‌ನಿಂದ ತಯಾರಾದ ಕ್ಯಾರಿಬ್ಯಾಗ್, ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್, ಪೇಟೆ, ಧ್ವಜ, ಕಪ್, ಸ್ಪೂನ್, ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಹಾಳೆ, ಧರ್ಮಕೋಲ್ ಮತ್ತು ಮೈಕೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಲಾಗಿದೆ

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮ 2016ರ ನಿಯಮ 4(2)ರ ಪ್ರಕಾರ (ತಿದ್ದುಪಡಿಯಂತೆ) ಪಾಲಿಸ್ಟೆರೀನ್ ಮತ್ತು ವಿಸ್ತರಿತ ಪಾಲಿಸ್ಟೆರಿನ್‌ ಸೇರಿದಂತೆ ಪ್ರಸ್ತಾವಿತ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿ, ಆಮದು, ಸಂಗ್ರಹ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 2022ರಿಂದಲೇ ನಿಷೇಧಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಕೆ, ನಿಯಮ ಉಲ್ಲಂಘನೆ ಮಾಡಿದ್ದಲ್ಲಿ 200 ರೂ.ಗಳಿಂದ 20 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು. ಪರವಾನಗಿ ರದ್ದು ಮಾಡಿ, ಉದ್ದಿಮೆ ಸಗಿತಗೊಳಿಸಲಾಗುವುದು ಎಂದು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.