ನ್ಯಾಯವಾದಿ ಅಬೂಬಕ್ಕರ್ ಅವರಿಂದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಗೆ ಮನವಿ ಸಲ್ಲಿಕೆ
ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿರುವ ಜಾಲ್ಸೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬುವುದಾಗಿ ಮಾನ್ಯತೆ ನೀಡಿ ಉನ್ನತೀಕರಿಸಬೇಕೆಂದು ನ್ಯಾಯವಾದಿ ಅಬೂಬಕ್ಕರ್ ಅಡ್ಕಾರು ಅವರು ರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮನವಿ ಮಾಡಿದ್ದಾರೆ.
ಕಾರ್ಯಕ್ರಮ ನಿಮಿತ್ತ ಕಾಸರಗೋಡಿಗೆ ಆಗಮಿಸಿದ್ದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ನ್ಯಾಯವಾದಿ ಅಬೂಬಕ್ಕರ್ ಅಡ್ಕಾರು ಅವರು ಮನವಿ ಸಲ್ಲಿಸಿದರು.
ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ 1918ರಲ್ಲಿ ಸ್ಥಾಪನೆಗೊಂಡ ಜಾಲ್ಸೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಈಗಾಗಲೇ ಶತಮಾನೋತ್ಸವ ಪೂರೈಸಿದ್ದು, ಶಾಲೆಯಿಂದ ವಿದ್ಯಾಭ್ಯಾಸ ಪೂರೈಸಿ ಹೊರಬಂದಿರುವ ಸಹಸ್ರಾರು ಮಂದಿ ದೇಶ – ವಿದೇಶಗಳಲ್ಲಿ ಮಹೋನ್ನತ ಹುದ್ದೆಗಳನ್ನು ಹೊಂದಿದ್ದಾರೆ.
ಪ್ರಸ್ತುತ ಈ ಪರಿಸರದಲ್ಲಿ ಮಧ್ಯಮ ವರ್ಗದ ಮತ್ತು ಬಡತನ ರೇಖೆಯಲ್ಲಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನಸಾಮಾನ್ಯರು ವಾಸಿಸುತ್ತಿದ್ದು, ಇಲ್ಲಿರುವ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂಬುದಾಗಿ ಮಾನ್ಯತೆ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಸ್ಮಾನ್ ಫಾಝ್ ಅಡ್ಕಾರು, ಲತೀಫ್ ಅಡ್ಕಾರು , ಜುನೈದ್ ಅಡ್ಕಾರು, ನೌಶಾದ್ ಅಡ್ಕಾರು, ರಜಾಕ್ ತಾಯತ್, ಮಾಸ್ಟ್ ಮೊನುದ್ಧೀನ್, ಅಲಿ ಜಿ.ಎಂ. ಅಡ್ಕಾರು, ಕಲಂದರ್ ಅಡ್ಕಾರು, ಸಿನಾನ್ ಅಡ್ಕಾರು ಉಪಸ್ಥಿತರಿದ್ದರು.